ಜಿದ್ದ, ಜು. 17: ಸೌದಿ ಅರೇಬಿಯಕ್ಕೆ ಉಮ್ರ ವೀಸಾದಲ್ಲಿ ಬರುವವರಿಗೆ ದೇಶದ ಎಲ್ಲ ನಗರಗಳಿಗೆ ಭೇಟಿ ನೀಡುವುದಕ್ಕೆ ಮತ್ತು ವ್ಯಾಪಾರದ ಅಂಗಡಿಗಳು 24 ಗಂಟೆಗಳ ಕಾಲ ತೆರೆದಿಡಲು ಸರಕಾರ ಅನುಮತಿ ನೀಡಲು ನಿರ್ಧರಿಸಿದ್ದು ದೊರೆ ಸಲ್ಮಾನ್ರ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈಗ ಹನ್ನೆರಡು ಗಂಟೆಗಳ ಕಾಲ ಮಾತ್ರ ಅಂಗಡಿಗಳು ತೆರೆದಿಡಲು ಅನುಮತಿ ಇದೆ. ಇನ್ನು ಮುಂದೆ ಸಾರ್ವಜನಿಕರ ಹಿತದಾಧಾರದಲ್ಲಿ 24 ಗಂಟೆಗಳ ಅನುಮತಿ ನೀಡುವುದಕ್ಕಾಗಿಯೇ ಪ್ರತ್ಯೇಕ ವಿಭಾಗವನ್ನು ರಚಿಸುವುದು ಸಚಿವ ಸಂಪುಟದ ಅಭಿಪ್ರಾಯವಾಗಿದ್ದು ಮುನ್ಸಿಪಲ್ ಗ್ರಾಮ ವಿಷಯ ಸಚಿವಾಲಯವನ್ನು ಜಾರಿಗೊಳಿಸುವಂತೆ ಸಚಿವ ಸಂಪುಟ ಆಗ್ರಹಿಸಿದೆ.
ವಿಶ್ರಮ ರಹಿತ 24 ಗಂಟೆಗಳು ಅಂಗಡಿಗಳು ಕಾರ್ಯನಿರ್ವಹಿಸುವ ತೀರ್ಮಾನ ವ್ಯಾಪಾರೀ ಕ್ಷೇತ್ರದಲ್ಲಿ ದೊಡ್ಡ ಜಾಗೃತಿ ತರಬಹುದು ಎಂದು ಸಚಿವ ಸಂಪುಟದ ನಿರೀಕ್ಷೆಯಾಗಿದೆ. ರಾತ್ರೆ ಹನ್ನೆರಡು ಗಂಟೆಗೆ ಅಂಗಡಿ ಈವರೆಗೂ ಮುಚ್ಚಬೇಕಾಗಿತ್ತು. ರಮಝಾನ್ನಲ್ಲಿ ಇದಕ್ಕೆ ವಿನಾಯತಿ ಇತ್ತು. ನಿಯಮಾಧಾರಿತ ಕೆಲವು ಅಂಗಡಿಗಳಿಗೆ ವಿನಾಯಿತಿ ಇರುತ್ತಿತ್ತು. ಇದನ್ನು ಎಲ್ಲ ಅಂಗಡಿಗಳಿಗೆ ವಿಸ್ತರಿಸಲು ಯೋಜನೆ ರೂಪಿಸಲಾಗುತ್ತಿದೆ. ನಮಾಝ್ ಸಮಯದಲ್ಲಿ ಅಂಗಡಿ ಮುಚ್ಚಬೇಕೆನ್ನುವ ಹಿಂದಿನ ಕಾನೂನು ಮುಂದುವರಿಯಲಿದೆಯೇ ಎನ್ನುವುದು ಈಗ ಸ್ಪಷ್ಟವಾಗಿಲ್ಲ. ಉಮ್ರ, ಸಂದರ್ಶನ ವೀಸಾದಲ್ಲಿ ಸೌದಿಗೆ ಬರುವವರು ಎಲ್ಲ ನಗರಗಳಲ್ಲಿಯೂ ಸಂಚರಿಸಬಹುದು. 36 ವರ್ಷಗಳ ಹಿಂದೆ ಪಾಸು ಮಾಡಿದ ಕಾನೂನು ಹೊಸ ತೀರ್ಮಾನದ ಬಳಿಕ ದುರ್ಬಲಗೊಳ್ಳುತ್ತಿದೆ. ಉಮ್ರ ವೀಸಾದಲ್ಲಿ ಸೌದಿಗೆ ಬರುವವರು, ಮಕ್ಕ, ಮದೀನಾ, ಜಿದ್ದ ನಗರಗಳ ಹೊರಗೆ ಹೋಗುವುದನ್ನು 1987ರಲ್ಲಿ ತಡೆಹಿಡಿಯಲಾಗಿದ್ದು, ಈಗ ಸೌದಿ ಅರೇಬಿಯ ದ ಎಲ್ಲ ನಗರಗಳಿಗೆ ಹೋಗಲು ಅವಕಾಶ ಒದಗಿಸಲಾಗುತ್ತಿದೆ.












