ಯುಎಇ ಗಡಿಪಾರುಗೊಳಿಸಿದ ತಮಿಳರನ್ನು ದಿಲ್ಲಿಯಲ್ಲಿ ಬಂಧಿಸಿದ ರಾಷ್ಟ್ರೀಯ ತನಿಖಾ ದಳ; 15 ದಿನಗಳ ರಿಮಾಂಡು

0
648

ಚೆನ್ನೈ, ಜು. 17: ದಿಲ್ಲಿಯಲ್ಲಿ ಕಳೆದ ದಿವಸ ಎನ್‍ಐಎ ಬಂಧಿಸಿದ 14 ಮಂದಿ ತಮಿಳ್ನಾಡಿನವರನ್ನು ಯುಎಇ ಗಡೀಪಾರು ಗೊಳಿಸಿತ್ತು ಎಂದು ಕೇಂದ್ರ ಸರಕಾರ ತಿಳಿಸಿದೆ. ಭಯೋತ್ಪಾದಕ ಸಂಘಟನೆಗಳಿಗೆ ಅರಬ್ ದೇಶದಲ್ಲಿ ಹಣ ಸಂಗ್ರಹ ಮಾಡುತ್ತಿದ್ದ ಆರೋಪದಲ್ಲಿ ಅವರನ್ನು ಯುಎಇ ಬಂಧಿಸಿ ಎರಡು ಬ್ಯಾಚುಗಳಲ್ಲಿ ಭಾರತಕ್ಕೆ ಗಡೀಪಾರುಗೊಳಿಸಿತ್ತು ಎಂದು ಚೆನ್ನೈನ ಸ್ಪೆಶಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಸಿಎಸ್‍ಎಸ್ ಪಿಳ್ಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸೋಮವಾರ ಹದಿನಾಲ್ಕು ಮಂದಿ ದಿಲ್ಲಿಯಿಂದ ವಿಮಾನದ ಮೂಲಕ ಚೆನ್ನೈಗೆ ಕರೆತಂದು ಪೂಂದಮಲ್ಲಿ ವಿಶೇಷ ಕೋರ್ಟಿನಲ್ಲಿ ಹಾಜರುಪಡಿಸಲಾಗಿದೆ. ಇವರನ್ನು ಜುಲೈ 25 ರವರೆಗೆ ಚೆನ್ನೈ ಪುಯಲ್ ಜೈಲಿನಲ್ಲಿ ರಿಮಾಂಡಿನಲ್ಲಿರಿಸಲಾಗಿದೆ ಮೊಯ್ದಿನ್ ಶಾಹುಲ್ ಹಮೀದ್, ಮುಹಮ್ಮದ್ ಇಬ್ರಾಹೀಂ, ಮೀರಾನ್‍ ಕನಿ, ಮುಹಮ್ಮದ್ ಶೇಖ್, ಮುಹಮ್ಮದ್ ಅಝರುದ್ದೀನ್, ತೌಫೀಖ್ ಅಹ್ಮದ್, ಮುಹಮ್ಮದ್ ಅಕ್ಸರ್, ಗುಲಾಂ ನಬಿ ಆಝಾದ್, ರಾಫಿ ಅಹ್ಮದ್, ಉಮರ್ ಫಾರೂಕ್, ಫೈಝಲ್ ಶರೀಫ್, ಮುಹಮ್ಮದ್ ಇಬ್ರಾಹೀಂ, ಮುತ್ತಬ್ಸೀರ್, ಫಾರೂಕ್‍ ಮೂರು ತಿಂಗಳಿನಿಂದ ಯುಎಇ ಜೈಲಿನಲ್ಲಿದ್ದರು. ಇವರ ವಿರುದ್ಧ ಭಯೋತ್ಪಾದಕರಿಗೆ ಫಂಡ್ ಸಂಗ್ರಹ, ರಿಕ್ಯೂಟ್‍ಮೆಂಟ್, ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ (ಯುಎಪಿಎ ಸೆಕ್ಷನ್ -17, 18,38,39) ಗೂಢಾಲೋಚನೆ (ಐಪಿಸಿ 120 ಬಿ), ಆಯುಧ ಸಂಗ್ರಹ (ಐಪಪಿಸಿ 122) ಮೊದಲಾದ ಕಲಂ ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಸಿಕ್ಕ ಸುಳಿವು ಪ್ರಕಾರ ಎರಡು ದಿವಸ ಮೊದಲು ಚೆನ್ನೈ, ನಾಗಪಟ್ಟಣಂಗಳಲ್ಲಿ ಎನ್‍ಐಎ ದಾಳಿ ಮಾಡಿತ್ತು. ಅನ್ಸಾರುಲ್ಲ ಎಂಬ ಸಂಘಟನೆಯ ಹೆಸರಿನಲ್ಲಿ ಇವರು ಕೆಲಸ ಮಾಡುತ್ತಿದ್ದರು. ನಾಗಪಟ್ಟಣಂನ ಹಸನ್‍ ಅಲಿ, ಹಾರಿಸ್ ಮುಹಮ್ಮದ್ ಎನ್ನುವ ಇಬ್ಬರನ್ನು ಕೂಡ ಬಂಧಿಸಲಾಗಿತ್ತು. ಇವರಿಂದ ಬ್ಯಾಂಕ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.