ಸನ್ಮಾರ್ಗ ವಾರ್ತೆ
ಉಮ್ರಾ ಮತ್ತು ಇನ್ನಿತರ ವಿಸಿಟಿಂಗ್ ವೀಸಾದ ಅವಧಿ ಮುಗಿದೂ ದೇಶ ತೊರೆಯದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸೌದಿ ಅರೇಬಿಯಾ ಎಚ್ಚರಿಸಿದೆ. ಹೀಗೆ ದೇಶ ತೊರೆಯದವರಿಗೆ 50,000 ರಿಯಾಲ್ ವರೆಗೆ ದಂಡ ವಿಧಿಸಲಾಗುವುದು ಮತ್ತು ಆರು ತಿಂಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಸೌದಿ ಅರೇಬಿಯಾ ಎಚ್ಚರಿಸಿದೆ.
ಹಜ್ ಹೊರತಾದ ವಿಸಾಗಳಲ್ಲಿ ಸೌದಿ ಅರೇಬಿಯ ತಲುಪಿದವರಿಗೆ ಹಜ್ ನಿರ್ವಹಿಸಲು ಅನುಮತಿ ಇಲ್ಲ. ಹಜ್ ನಿಯಮಗಳನ್ನು ಮತ್ತು ನಿರ್ದೇಶನಗಳನ್ನು ಉಲ್ಲಂಘಿಸುವವರ ಮಾಹಿತಿಯನ್ನು ಸಾರ್ವಜನಿಕರು ನೀಡಬೇಕು. ಮಕ್ಕ ರಿಯಾದ್ ಇತ್ಯಾದಿ ಕಡೆಗಳಲ್ಲಿ ಇರುವವರು 911 ಸಂಖ್ಯೆಗೂ ಇತರ ಕಡೆ ಇರುವವರು 999 ಸಂಖ್ಯೆಗೂ ಮಾಹಿತಿಯನ್ನು ನೀಡಬೇಕು ಎಂದು ಸೌದಿ ಸರಕಾರ ಕೋರಿದೆ. ಅವಧಿ ಮುಗಿದೂ ಸೌದಿಯನ್ನು ತೊರೆಯದವರ ಬಗ್ಗೆ ಮಾಹಿತಿ ನೀಡದ ಟ್ರಾವೆಲ್ಸ್ ಕಂಪನಿಗಳ ವಿರುದ್ಧ 1 ಲಕ್ಷ ರಿಯಲ್ ವರೆಗೆ ದಂಡ ವಿಧಿಸಲಾಗುವುದು ಎಂದು ಕೂಡ ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.












