ಸನ್ಮಾರ್ಗ ವಾರ್ತೆ
ತೆಲಂಗಾಣದ ಸಂಘ ರೆಡ್ಡಿ ಜಿಲ್ಲೆಯ ಜಿನ್ನಾರಾ ಗ್ರಾಮದಲ್ಲಿ ಕೋಮುವಾದಿಗಳು ಮದರಸದ ಮೇಲೆ ದಾಳಿ ಮಾಡಿದ್ದು ಮದರಸ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಮಾತ್ರ ಅಲ್ಲ ಹತ್ತಿರದಲ್ಲೇ ಇರುವ ದರ್ಗಾಕ್ಕೆ ಬೆಂಕಿ ಕೊಡಲು ಯತ್ನಿಸಿದ್ದಾರೆ. ಈ ಮದ್ರಸ ವಿದ್ಯಾರ್ಥಿಗಳು ಸ್ಥಳೀಯ ದೇವಾಲಯದ ಶಿವಲಿಂಗವನ್ನು ದ್ವoಸ ಮಾಡಿದ್ದಾರೆ ಎಂದು ಈ ಕೋಮುವಾದಿಗಳು ಆರೋಪಿಸಿದ್ದಾರೆ. ಆದರೆ ಆ ಬಳಿಕ ಸಿಸಿಟಿವಿ ಫೂಟೇಜನ್ನು ಬಿಡುಗಡೆ ಮಾಡಲಾಗಿದ್ದು ಮಂಗಗಳು ಶಿವಲಿಂಗವನ್ನು ದ್ವಂಸ ಮಾಡಿರುವುದು ಸ್ಪಷ್ಟವಾಗಿದೆ.
ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಬಂದ ಗುಂಪು ಮದ್ರಸಾ ಅರೇಬಿಯಾ ತಾಲಿ ಮುಲ್ ಕುರ್ ಆನ್ ಎಂಬ ಮದರಸದ ಮೇಲೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ 80 ವಿದ್ಯಾರ್ಥಿಗಳಿದ್ದರು. ಈ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಈ ಗುಂಪು ದೈಹಿಕ ಹಲ್ಲೆಯನ್ನು ನಡೆಸಿದೆ.
ಪೊಲೀಸರು ಬಂದು ಈ ಗುಂಪನ್ನು ಚದುರಿಸಿದಾಗ ಅವರು ಹತ್ತಿರದಲ್ಲೇ ಇರುವ ಹಜರತ್ ಗರೀಬ್ ಶಾ ವಾಲಿಯವರ ದರ್ಗಾ ಕೆ ಹೋದರು ಮತ್ತು ದರ್ಗಾಕ್ಕೆ ಹಾಸಲಾಗಿದ್ದ ಚಾದರಕ್ಕೆ ಬೆಂಕಿ ಕೊಟ್ಟರು.
ಘಟನೆಯ ಬಳಿಕ ಸ್ಥಳೀಯ ಮುಸ್ಲಿಮರು ಭಾರಿ ಪ್ರತಿಭಟನೆ ನಡೆಸಿದ್ದು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.












