ಭ್ರಷ್ಟಾಚಾರ: ಸೌದಿ ಅರೇಬಿಯದಲ್ಲಿ ನೂರಾರು ಸರಕಾರಿ ನೌಕರರ ಬಂಧನ

0
1011

ಸನ್ಮಾರ್ಗ ವಾರ್ತೆ

ರಿಯಾದ್, ಮಾ. 17: ಲಂಚ ಪಡೆದ ಆರೋಪ ಮತ್ತು ಸರಕಾರಿ ಕಚೇರಿಗಳನ್ನು ದುರುಪಯೋಗಿಸಿದ ಆರೋಪದಲ್ಲಿ ನೂರಾರು ಸರಕಾರಿ ಉದ್ಯೋಗಿಗಳನ್ನು ಸೌದಿ ಅರೇಬಿಯ ಬಂಧಿಸಿದೆ. ಸೈನಿಕ, ಸುರಕ್ಷಾ ಅಧಿಕಾರಿಗಳು ಕೂಡ ಬಂಧಿತರಲ್ಲಿ ಒಳಗೊಂಡಿದ್ದಾರೆ. ಈ ವಿವರವನ್ನು ರವಿವಾರ ಸೌದಿ ಅರೇಬಿಯ ಭ್ರಷ್ಟಾಚಾರ ವಿರೋಧಿ ಆಯೋಗ ತಿಳಿಸಿದೆ.

ಕಸ್ಟಡಿಯಲ್ಲಿರುವ ನೌಕರರ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು 2017ರಲ್ಲಿಯೂ ಸೌದಿ ಅರೇಬಿಯದಲ್ಲಿ ಇದಕ್ಕೆ ಸಮಾನವಾದ ಬಂಧನ ಸತ್ರ ನಡೆದಿತ್ತು. ಅಂದು ಶ್ರೀಮಂತ ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಸೌದಿ ಸರಕಾರ ಭ್ರಷ್ಟಾಚಾರ ವಿರುದ್ಧ ಹೋರಾಟದ ಭಾಗವಾಗಿ ಈ ಬಂಧನ ಕಾರ್ಯ ನಡೆಸಿದೆ ಎಂದು ಮೂಲಗಳು ತಿಳಿಸಿವೆ.