ಬದಲಿಸಲಾಗದ ಕಾನೂನೇ ಇಲ್ಲ: ಸುಪ್ರೀಂ ಕೋರ್ಟ್

0
1673

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 22: ಬದಲಿಸಲಾಗದ ಯಾವ ಕಾನೂನೂ ಇಲ್ಲ ಎಂದು ಸುಪ್ರೀಂಕೋರ್ಟು ಹೇಳಿದೆ. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಅರ್ಜಿಗಳಲ್ಲಿ ಪ್ರಾಥಮಿಕ ಆಲಿಕೆ ನಡೆಸಿದ ಚೀಫ್ ಜಸ್ಟಿಸ್ ಎಸ್‍ ಎ ಬೊಬ್ಡೆ ಈ ಅಭಿಪ್ರಾಯ ತಿಳಿಸಿದರು. ಅರ್ಜಿಗಳನ್ನು ಸಂವಿಧಾನ ಪೀಠಕ್ಕೆ ರವಾನಿಸಬೇಕಾಗಬಹುದು ಎಂದು ಎಸ್‍ ಎ ಬೊಬ್ಡೆ ಹೇಳಿದರು. ಎಲ್ಲ ದೂರುಗಳಿಗೂ ಕೋರ್ಟಿಗೆ ಉತ್ತರ ಸಿಗಬೇಕಾಗಿದೆ ಎಂದು ಜಸ್ಟಿಸ್ ಬೊಬ್ಡೆ ತಿಳಿಸಿದರು.

ಪೌರತ್ವ ಕಾನೂನಿನ ಜಾರಿ ತುರ್ತು ವಿಷಯವೆಂದು ಅಡ್ವೊಕೇಟ್ ಕೆ ವಿ ವಿಶ್ವನಾಥ್ ವಾದಿಸಿದ್ದಾರೆ. ಪ್ರಕ್ರಿಯೆ ನಿಲ್ಲಿಸಲು ಆದೇಶ ಹೊರಡಿಸಬೇಕು. ಈಗ ತಡೆಯಾಜ್ಞೆಗೆಆವಕಾಶವಿಲ್ಲ ಎಂದು ಕೋರ್ಟು ಹೇಳಿತು. ಹೊಸ ಅರ್ಜಿಗಳನ್ನು ಸ್ವೀಕರಿಸಬಾರದೆಂದು ಅಟಾರ್ನಿ ಜನರಲ್ ವಾದಿಸಿದರು. ವಿರುದ್ಧ ಅಫಿದಾವಿತ್ ಸಿದ್ಧವಿದೆ. ಮಧ್ಯಂತರ ಆದೇಶ ಹೊರಡಿಸಬೇಕೆಂದು ಅಡ್ವೊಕೇಟ್ ವಿಕಾಸ್ ಸಿಂಗ್ ವಾದಿಸಿದರು. ಎನ್‍ಪಿಆರ್ ಪ್ರಕ್ರಿಯೆ ನಿಲ್ಲಿಸಬೇಕೆಂದು ಕಪಿಲ್ ಸಿಬಲ್ ವಾದಿಸಿದರು.

ಪೌರತ್ವ ಕಾನೂನು ಪ್ರಕ್ರಿಯೆಯನ್ನು ಮೂರು ತಿಂಗಳಿಗೆ ಮುಂದೂಡಬೇಕೆಂದು ಮುಸ್ಲಿಂ ಲೀಗ್‍ಗಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದ್ದು ಒಂದು ಬಾರಿ ಪೌರತ್ವ ನೀಡಿದರೆ ಪುನಃ ಅದನ್ನು ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಸಿಬಲ್ ಬೆಟ್ಟುಮಾಡಿದರು.

ಕೆಲವು ರಾಜ್ಯಗಳಲ್ಲಿ ಎನ್‍ಪಿಆರ್ ಪ್ರಕ್ರಿಯೆ ಆರಂಭವಾಗಿದೆ. ಅಂತಿಮ ತೀರ್ಪು ಬರುವ ಮೊದಲು ಪ್ರಕ್ರಿಯೆ ಮುಂದೆ ಸಾಗುತ್ತಿದೆ. ಕೋರ್ಟಿನ ಆದೇಶದ ಅಂತಃಸತ್ವಕ್ಕೆ ಸರಕಾರದ ಕ್ರಮ ಪ್ರತಿಕೂಲವಾಗಿ ಬಾಧಿಸುತ್ತದೆ ಎಂದು ಅಭಿಶೇಕ್ ಮನು ಸಿಂಘ್ವಿ ಹೇಳಿದರು. ಚೀಫ್ ಜಸ್ಟಿಸ್ ಎಸ್ ಎ ಬೊಬ್ಡೆಯ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ಸಿಎಎ ಅರ್ಜಿಗಳ ಮೇಲೆ ಪ್ರಾಥಮಿಕ ವಾದವನ್ನು ಆಲಿಸುತ್ತಿದೆ. ಜಸ್ಟಿಸ್ ಎಸ್. ಅಬ್ದುಲ್ ನಝೀರ್, ಸಂಜೀವ್ ಖನ್ನ ಪೀಠದ ಇತರ ಸದಸ್ಯರಾಗಿದ್ದಾರೆ. ಮುಸ್ಲಿಂ ಲೀಗ್, ಕಾಂಗ್ರೆಸ್ ನಾಯಕ ಜೈರಾಂ ರಮೇಶ್, ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ, ಡಿಎಂಕೆ, ಸಿಪಿಎಂ, ಸಿಪಿಐ ಸಹಿತ 133 ಅರ್ಜಿಗಳನ್ನು ಸುಪ್ರೀಂಕೋರ್ಟು ವಿಚಾರಣೆಗೆ ಎತ್ತಿಕೊಂಡಿದೆ.