ತರುಣ್ ತೇಜ್‍ಪಾಲ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣವನ್ನು ತಳ್ಳಿಹಾಕಲಾಗದು ಎಂದ ಸುಪ್ರೀಂ ಕೋರ್ಟ್

0
391

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.19: ತೆಹಲ್ಕಾ ಮ್ಯಾಗಝಿನ್ ಸ್ಥಾಪಕ ಸಂಪಾದಕ ತರುಣ್ ತೇಜ್‍ಪಾಲ್ ವಿರುದ್ಧವಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ತಳ್ಳಿಹಾಕುವುದಿಲ್ಲ ಎಂದು ಸುಪ್ರೀಂಕೋಟು ಹೇಳಿದೆ. 2013ರ ಲೈಂಗಿಕ ಕಿರುಕುಳ ಪ್ರಕರಣವನ್ನು ತಳ್ಳಿಹಾಕಬೇಕೆಂದು ಆಗ್ರಹಿಸಿ ತರುಣ್ ತೇಜ್‍ಪಾಲ್ ಸಲ್ಲಿಸಿದ ಅರ್ಜಿಯಲ್ಲಿ ಕೋರ್ಟು ಈ ರೀತಿ ಆದೇಶ ನೀಡಿದೆ. ನೈತಿಕತೆಗೆ ವಿರುದ್ಧವಾದ ಪ್ರಕರಣ ಇದೆಂದು ಕೋರ್ಟು ಹೇಳಿದೆ. ಗಂಭೀರ ಪ್ರಕರಣ ತೇಜ್‍ಪಾಲ್ ವಿರುದ್ಧ ಇದೆ. ಆರು ತಿಂಗಳಿನೊಳಗೆ ವಿಚಾರಣೆ ಪೂರ್ತಿ ಮಾಡಬೇಕೆಂದು ಜಸ್ಟಿಸ್ ಅರುಣ್ ಮಿಶ್ರ ಅಧ್ಯಕ್ಷತೆಯ ಸುಪ್ರೀಂಕೋರ್ಟು ಪೀಠವು ಗೋವಾ ಕೋರ್ಟಿಗೆ ಆದೇಶಿಸಿದೆ.

ತರುಣ್ ತೇಜ್‍ಪಾಲ್ ವಿರುದ್ಧ ಆರು ವರ್ಷಗಳ ಹಿಂದೆಯೇ ಆರೋಪ ಹೊರಿಸಲಾಗಿದ್ದು ಇನ್ನು ವಿಚಾರಣೆಯಲ್ಲಿ ವಿಳಂಬ ಸಾಧ್ಯವಿಲ್ಲ. ತೇಜ್‍ಪಾಲ್‍ಗೆ ಯಾವ ವಿನಾಯಿತಿಯೂ ನೀಡಬಾರದು ಎಂದು ಸುಪ್ರೀಂಕೋರ್ಟು ಹೇಳಿದೆ. 2017 ಸೆಪ್ಟಂಬರಿನಲ್ಲಿ ಗೋವಾ ಕೋರ್ಟು ತೇಜ್‍ಪಾಲ್ ವಿರುದ್ಧ ಅತ್ಯಾಚಾರ, ಲೈಂಗಿಕ ಆಕ್ಷೇಪ, ತಡೆದಿರಿಸುವಿಕೆ ಮುಂತಾದ ಆರೋಪಗಳನ್ನು ಹೊರಿಸಿತ್ತು.ಆದರೆ ಈ ಎಲ್ಲಾ ಆರೋಪಗಳನ್ನು ತೇಜ್‍ಪಾಲ್ ನಿರಾಕರಿಸಿದ್ದಾರೆ. ಗೋವಾದ ಹೊಟೇಲಿನಲ್ಲಿ ನಡೆದ ತಿಂಕ್ ಫೆಸ್ಟ್‌ನ ವೇಳೆ ಸಹೋದ್ಯೋಗಿಗೆ ತರುಣ್ ತೇಜ್‍ಪಾಲ್ ಲೈಂಗಿಕ ಕಿರುಕುಳ ನೀಡಿದ್ದರೆಂದು ಆರೋಪಿಸಿ ಕೇಸು ದಾಖಲಾಗಿತ್ತು. 2013 ನವೆಂಬರ್ 30ರಂದು ತೇಜ್‍ಪಾಲ್‍ರನ್ನು ಬಂಧಿಸಲಾಗಿತ್ತು. 2014 ಮೇ ತಿಂಗಳಲ್ಲಿ ಅವರಿಗೆ ಜಾಮೀನು ನೀಡಲಾಗಿತ್ತು.