ಸನ್ಮಾರ್ಗ ವಾರ್ತೆ
ಲಂಡನ್,ಜೂ.4:ಎರಡು ತಿಂಗಳುಗಳ ಬಳಿಕ ಲಂಡನಿನಾದ್ಯಂತ ಶಾಲೆಗಳು ಮತ್ತೆ ತೆರೆಯುವುದರೊಂದಿಗೆ ಒಂದೇ ಶಾಲೆಯಲ್ಲಿ ಏಳು ಉದ್ಯೋಗಿಗಳು ಕೊರೋನವೈರಸ್ಗೆ ತುತ್ತಾಗಿದ್ದು ದೃಢಪಟ್ಟಿದೆ. ಕೊರೋನ ವೈರಸ್ ಪಾಸಿಟಿವ್ ಎಂದು ದೃಢವಾದ ನಂತರ ಡರ್ಬಿಯಲ್ಲಿರುವ ಅರ್ಬೊರೇಟಂ ಪ್ರಾಥಮಿಕ ಶಾಲೆ ಮುಚ್ಚಲ್ಪಟ್ಟಿದೆ.
ಎಲ್ಲಾ ಏಳು ಸಿಬ್ಬಂದಿಗಳಿಗೆ ಲಘುವಾದ ಕೊರೋನಾ ವೈರಸ್ ರೋಗಲಕ್ಷಣಗಳನ್ನು ಹೊಂದಿದ್ದರು ಮತ್ತು ಅವರೀಗ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಶಾಲೆಯ ವಕ್ತಾರರು ಹೇಳಿದರು.
ಫ್ರಾನ್ಸ್,ಜೂ.4: ಕಳೆದ ವಾರ ಫ್ರಾನ್ಸ್ನಲ್ಲಿ ಆರಂಭಗೊಂಡ ಶಾಲೆಗಳಲ್ಲಿ ಇದೀಗ 70 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿವೆ. ಒಂದು ವಾರದ ಬಳಿಕ 1 ಮಿಲಿಯನ್ಗಿಂತಲೂ ಹೆಚ್ಚು ಮಕ್ಕಳು ಮತ್ತೆ ತರಗತಿಗೆ ಪ್ರವೇಶಿಸಲು ಸರಕಾರವು ಅವಕಾಶ ಮಾಡಿಕೊಟ್ಟಿತ್ತು.
ಶಾಲೆಗಳ ಆರಂಭದೊಂದಿಗೆ 10 ಪ್ರೀ ಸ್ಕೂಲ್ ವಿದ್ಯಾರ್ಥಿಗಳು ಮತ್ತು ಇತರೆ ವಯಸ್ಸಿನ 15 ವಿದ್ಯಾರ್ಥಿಗಳು ಕೊರೋನಾ ಸೋಂಕಿಗೀಡಾಗಿದ್ದಾರೆ.ಪ್ರಾನ್ಸ್ನಲ್ಲಿ ಕೊರೋನಾ ತಡೆಗಟ್ಟುವಿಕೆಯ ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಚ್ 17 ರಿಂದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿತ್ತು.
ಇಸ್ರೇಲ್,ಜೂ.4:ಇಸ್ರೇಲಿನಲ್ಲಿ ಎರಡು ವಾರಗಳ ಹಿಂದೆ ಶಾಲೆಗಳು ಮರು ಪ್ರಾರಂಭವಾಗಿದ್ದು, 10 ಸಾವಿರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಇಸ್ರೇಲ್ ಶಾಲೆಗಳನ್ನು ಸಂಪೂರ್ಣವಾಗಿ ತೆರೆಯುವಿಕೆಯ ಎರಡು ವಾರಗಳ ನಂತರ ಕೋವಿಡ್-19 ಏಕಾಏಕಿ ತರಗತಿ ಕೋಣೆಗಳನ್ನು ವ್ಯಾಪಿಸಿದ್ದು, ಒಂದೇ ಶಾಲೆಯಲ್ಲಿ ಕನಿಷ್ಠ 130 ಪಾಸಿಟಿವ್ ಪ್ರಕರಣಗಳು ದೃಢವಾಗಿವೆ. 6800 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಕ್ವಾರಂಟೈನ್ ಮಾಡಲಾಗಿದೆ.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸೋಂಕಿಗೆ ಒಳಗಾದ ಬೆನ್ನಲ್ಲೇ ಡಜನ್ ಗಟ್ಟಲೆ ಶಾಲೆಗಳನ್ನು ಮುಚ್ಚಲು ಅಧಿಕಾರಿಗಳು ಆದೇಶಿಸಿದ್ದಾರೆ. ವೈರಸ್ ಪ್ರಕರಣವು ವರದಿಯಾಗುವ ಯಾವುದೇ ಶಾಲೆಯನ್ನು ತಕ್ಷಣ ಮುಚ್ಚಬೇಕೆಂದು ಹೊಸ ನೀತಿಯು ಆದೇಶಿಸುತ್ತದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












