ಸನ್ಮಾರ್ಗ ವಾರ್ತೆ
ಅಮ್ಮಾನ್,ಜೂ.4: ವೆಸ್ಟ್ಬ್ಯಾಂಕ್ ಅತಿಕ್ರಮಣದೊಂದಿಗೆ ಮುಂದೆ ಸಾಗುತ್ತಿರುವ ಇಸ್ರೇಲ್ ವಿರುದ್ಧ ಜೋರ್ಡಾನ್ ಕಟು ಮುನ್ನೆಚ್ಚರಿಕೆ ಕೊಟ್ಟಿದೆ. ಈ ಯೋಜನೆಯೊಂದಿಗೆ ಇಸ್ರೇಲ್ ಮುಂದುವರಿದರೆ ಗಂಭೀರ ಪ್ರತ್ಯಾಘಾತಗಳನ್ನು ಎದುರಿಸಬೇಕಾಗುವುದು ಎಂದು ಜೋರ್ಡಾನಿನ ವಿದೇಶ ಸಚಿವ ಅಯ್ಮನ್ ಸಫಾದಿ ಹೇಳಿದರು.
ವೆಸ್ಟ್ಬ್ಯಾಂಕ್ ಜೋರ್ಡಾನ್ ಕಣಿವೆಯನ್ನು ಟೆಲ್ಅವೀವ್ನೊಂದಿಗೆ ಸೇರಿಸಲು ಹೋದರೆ ವಲಯದಲ್ಲಿ ಶಾಂತಿ ಕದಡುತ್ತದೆ. ಅಲ್ಲದೇ ಇದು ಇಸ್ರೇಲ್-ಜೋರ್ಡಾನ್ ನಡುವಿನ ರಾಜತಾಂತ್ರಿಕ ಸಂಬಂಧವನ್ನ ಬಾಧಿಸಲಿದೆ. ಫೆಲಸ್ತೀನಿಯರಿಗಾಗಿ ಜಾರಿಗೊಳಿಸುವ ಸಹಾಯ ಯೋಜನೆಗಳ ಕುರಿತು ಅಡ್ಹಾಕ್ ಸಮಿತಿಯ ಸಭೆಯಲ್ಲಿ ಅವರು ಮಾತಾಡಿದರು. ಇಸ್ರೇಲ್ ವಶದಲ್ಲಿಟ್ಟುಕೊಳ್ಳುವ ಯೋಜನೆಗೆ ತಡೆಯೊಡ್ಡುವುದು ಎಂದು ಹೇಳಿದರೆ ಶಾಂತಿಯನ್ನು ಸಂರಕ್ಷಿಸುವುದು ಎಂದು ಅರ್ಥ.
ನಮ್ಮ ಮಾತುಗಳು ಬಹಳ ಸ್ಪಷ್ಟವಾಗಿವೆ. ಇಸ್ರೇಲಿನ ಅತಿಕ್ರಮಣಪೂರಿತ ವಿಸ್ತರಣೆಗೆ ಸ್ಪಷ್ಟ ಉತ್ತರವಿಲ್ಲ. ಒಂದು ವೇಲೆಲ ತೀರ್ಮಾನ ಜಾರಿಗೆ ಬಂದರೆ ಹಿಂಸಾತ್ಮಕ ಘರ್ಷಣೆ ಆರಂಭವಾಗಿ ಎರಡು ದೇಶಗಳಲ್ಲಿ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅವರು ಇಸ್ರೇಲ್ಗೆ ಎಚ್ಚರಿಕೆ ನೀಡಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












