ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಪಾಯಲ್‌ರನ್ನು ಬೆಂಬಲಿಸಿ ಕಂಗನಾ ರಂಗಪ್ರವೇಶ

0
396

ಸನ್ಮಾರ್ಗ ವಾರ್ತೆ

ಮುಂಬೈ,ಸೆ.20: ನಿರ್ದೇಶಕ, ಆಕ್ಟಿವಿಸ್ಟ್ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಆರೋಪ ಹೊರಿಸಿದ ತೆಲುಗು-ಹಿಂದಿ ನಟಿ ಪಾಯಲ್ ಘೋಷ್‍ರನ್ನು ಕಂಗನಾ ರಾಣಾವತ್ ಬೆಂಬಲಿಸಿದ್ದಾರೆ.

ಪಾಯಲ್ ಘೋಷ್ ಪ್ರಧಾನಿ ನರೇಂದ್ರ ಮೋದಿಗೆ ಟ್ಯಾಗ್ ಮಾಡಿ ಟ್ವಿಟರ್ ಮೂಲಕ ಅನುರಾಗ್ ಕಶ್ಯಪ್ ವಿರುದ್ಧ ಆರೋಪ ಹೊರಿಸಿದ್ದಾರೆ.

ತನ್ನೊಂದಿಗೆ ಅನುರಾಗ್ ತುಂಬ ಕೆಟ್ಟದಾಗಿ ವರ್ತಿಸಿದರು. ಪ್ರಧಾನಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು‌. ಈ ಸೃಜನಾತ್ಮಕ ವ್ಯಕ್ತಿಯ ಹಿಂದಿರುವ ರಾಕ್ಷಸನನ್ನು ದೇಶಕ್ಕೆ ತೋರಿಸಿಕೊಡಬೇಕು. ತನ್ನ ಸುರಕ್ಷೆ ಅಪಾಯದಲ್ಲಿದೆ ಎಂದು ಗೊತ್ತು. ದಯವಿಟ್ಟು ರಕ್ಷಿಸಬೇಕು ಎಂದು ನಟಿ ಟ್ವೀಟ್ ಮಾಡಿದ್ದರು.

ತೆಲುಗು ಚ್ಯಾನೆಲ್‍ಗೆ ನೀಡಿದ ಸಂದರ್ಶನದ ಲಿಂಕನ್ನು ಕೂಡ ನಟಿ ಹಂಚಿ ಕೊಂಡಿದ್ದಾರೆ. 2014ರಲ್ಲಿ ಕಶ್ಯಪ್ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದರು ಎಂದು ಪಾಯಲ್ ಘೋಷ್ ಆರೋಪಿಸಿದ್ದು, ಕಶ್ಯಪ್‍ರನ್ನು ಭೇಟಿಯಾಗಲು ಮನೆಗೆ ಹೋದಾಗ ಕೆಟ್ಟ ಅನುಭವವಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.

ನಟಿಗೆ ಕಂಗನಾ ರಾಣಾವತ್ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಅನುರಾಗ್ ಕಶ್ಯಪ್‍ರನ್ನು ಬಂಧಿಸಬೇಕೆಂದು ಕಂಗನಾ ಮೀಟು ಹ್ಯಾಶ್ ಟ್ಯಾಗ್‍ನೊಂದಿಗೆ ಪಾಯಲ್‍ರ ಟ್ವೀಟ್‍ಅನ್ನು ಹಂಚಿಕೊಂಡಿದ್ದಾರೆ.