ವ್ಯಾಪಕ ಪ್ರತಿಭಟನೆಯ ನಡುವೆ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ

0
327

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.20: ಪಂಜಾಬ್, ಹರಿಯಾಣ ಮುಂತಾದೆಡೆ ವ್ಯಾಪಕ ಪ್ರತಿಭಟನೆಗೆ ಕಾರಣವಾದ ವಿವಾದಿತ ರೈತ ಮಸೂದೆಯು ರಾಜ್ಯಸಭೆಯಲ್ಲಿ ಸರಕಾರ ಮಂಡಿಸಿತು.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದರು. ಮಸೂದೆಯ ಚರ್ಚೆಗೆ ನಾಲ್ಕು ಗಂಟೆ ಅವಧಿ ನೀಡಲಾಗಿದೆ. ಲೋಕಸಭೆಯಲ್ಲಿ ಮಸೂದೆಗಳು ಪಾಸಾಗಿದ್ದು ರಾಜ್ಯಸಭೆಯಲ್ಲಿ ಪಾಸು ಮಾಡುವ ಪರಿಶ್ರಮದಲ್ಲಿ ಕೇಂದ್ರ ಸರಕಾರ ತೊಡಗಿದೆ.

ರೈತರ ಬೆಳೆ ಮಾರಾಟ ವಾಣಿಜ್ಯ(ಪ್ರೋತ್ಸಾಹ ಮತ್ತು ಜಾರಿ) ಮಸೂದೆ 2020, ಬೆಲೆ ಖಚಿತಪಡಿಸುವ ಕೃಷಿ ಸೇವಾ ಸಬಲೀಕರಣ, ಸಂರಕ್ಷಣೆ ಒಪ್ಪಂದ 2020ವನ್ನು ಕೇಂದ್ರ ಸರಕಾರವು ಜಾರಿಗೊಳಿಸಲು ತಯಾರಾಗುತ್ತಿದೆ. ಈ ಹಿಂದಿನ ಸುಗ್ರೀವಾಜ್ಞೆಗಳಿಗೆ ಬದಲಾಗಿ ಹೊಸ ಮಸೂದೆ ಮಂಡನೆಯಾಗಿವೆ.

ರೈತರಿಗೆ ಇದು ಲಾಭದಾಯಕ ಎಂದು ಕೇಂದ್ರ ಸರಕಾರ ವಾದಿಸುತ್ತಿದೆ. ಆದರೆ ಕೃಷಿ ಕ್ಷೇತ್ರವನ್ನು ಕಾರ್ಪೊಟ್‍ಗಳಿಗೆ ಒತ್ತೆ ನೀಡುವ ಮಸೂದೆಗಳು ಎಂದು ರೈತರು ಆರೋಪಿಸುತ್ತಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.