ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 6: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದವನನ್ನು ಪೊಲೀಸರು ಬಂಧಿಸಿದ್ದಾರೆ. ಜೆಎನ್‍ಯುನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ರಾಘವೇಂದ್ರ ಮಿಶ್ರ ಬಂಧಿತ ವ್ಯಕ್ತಿ. ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿನಿಯನ್ನು ಈತ ಅತ್ಯಾಚಾರ ಮಾಡಲು ಯತ್ನಿಸಿದ್ದನು. ಕಲಿಯುವ ವಿಷಯದಲ್ಲಿ ಚರ್ಚಿಸಲು ಹಾಸ್ಟೆಲ್‍ಗೆ ಕರೆಸಿಕೊಂಡ ಬಳಿಕ ಈತ ಅತ್ಯಾಚಾರಕ್ಕೆ ಮುಂದಾಗಿದ್ದ. ಹಾಸ್ಟೆಲ್ ಕೋಣೆಯ ಅಪಾಯ ಸೂಚಕ ಅಲಾರಾಂ ಮೊಳಗಿಸಿದ ವಿದ್ಯಾರ್ಥಿನಿಯನ್ನು ಸೆಕ್ಯುರಿಟಿ ಗಾರ್ಡ್ ಬಂದು ರಕ್ಷಿಸಿದೆ. ನಂತರ ವಿದ್ಯಾರ್ಥಿಗಳು ಆರೋಪಿಯನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ರಾಘವೇಂದ್ರನ ವಿರುದ್ಧ ಭಾರತ ದಂಡ ಸಂಹಿತೆ 354, 323 ಪ್ರಕಾರ ಅಪರಾಧ ಹೊರಿಸಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದರು. ಸಬರ್ಮತಿ ಹಾಸ್ಟೆಲ್ ಪದಾಧಿಕಾರಿಯಾಗಿದ್ದ ರಾಘವೇಂದ್ರ ತನ್ನನ್ನು ಎರಡನೇ ಯೋಗಿ ಆದಿತ್ಯನಾಥ್ ಎಂದು ಸ್ವಯಂ ಕರೆದುಕೊಳ್ಳುತ್ತಿದ್ದ. ಯೋಗಿಯಂತೆ ಕೇಸರಿ ಬಟ್ಟೆ ಧರಿಸುತ್ತಿದ್ದ.
ರಾಘವೇಂದ್ರ ಹಾಸ್ಟೆಲ್‍ನಲ್ಲಿ ಹಲವು ಹೆಣ್ಣುಮಕ್ಕಳನ್ನು ಅಪಮಾನಿಸಲು ಶ್ರಮಿಸಿದ್ದ ಎಂಬ ದೂರುಗಳಿದ್ದವು. ವಿದ್ಯಾರ್ಥಿನಿಯರು ಮುಂದೆ ಬಂದು ಕೇಸು ಕೊಟ್ಟರೆ ಕೇಸು ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದರು.












