ಶಾರ್ಜಿಲ್ ಇಮಾಮ್ ಬೆಂಬಲಿಸಿ ಘೋಷಣೆ ಕೂಗಿದ ಉರ್ವಶಿ ಚೂಡಾವಾಲ ಸಹಿತ 50 ಮಂದಿ ವಿರುದ್ಧ ದೇಶ ದ್ರೋಹ ಪ್ರಕರಣ

0
666

ಸನ್ಮಾರ್ಗ ವಾರ್ತೆ

ಮುಂಬೈ, ಫೆ. 4: ದೇಶದ್ರೋಹ ಪ್ರಕರಣದಲ್ಲಿ ಬಂಧಿತನಾದ ಜೆಎನ್‍ಯು ಸಂಶೋಧನಾ ವಿದ್ಯಾರ್ಥಿ ಶಾರ್ಜಿಲ್ ಇಮಾಮ್‍ರನ್ನು ಬೆಂಬಲಿಸಿ ಘೋಷಣೆ ಕೂಗಿದ ಸುಮಾರು ಐವತ್ತರಷ್ಟು ಮಂದಿಯ ವಿರುದ್ಧ ಮುಂಬೈ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಶನಿವಾರ ಆಝಾದ್ ಮೈದಾನದಲ್ಲಿ ನಡೆದ ಪ್ರತಿಭಟನೆ ರ್ಯಾಲಿಯಲ್ಲಿ ಶಾರ್ಜಿಲ್ ಇಮಾಮ್‍ರನ್ನು ಬೆಂಬಲಿಸಿ ಘೋಷಣೆ ಕೂಗಿದವರ ವಿರುದ್ಧ ಸಮಾನ ಆರೋಪವನ್ನು ಹೊರಿಸಲಾಗಿದೆ.

ಟಾಟ ಇನ್ಸ್ ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ವಿದ್ಯಾರ್ಥಿ ಉರ್ವಶಿ ಚೂಡಾವಾಲ ಈ ವಿಷಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದಾರೆ. ಊರ್ವಶಿ ಸಹಿತ ಐವತ್ತರಷ್ಟು ಮಂದಿ ವಿರುದ್ಧ ದೇಶದ್ರೋಹ ಆರೋಪ ಹೊರಿಸಲಾಗಿದ್ದು ವಿಚಾರಣೆಗೆ ಪೊಲೀಸರು ಎರಡು ಬಾರಿ ಕರೆಸಿಕೊಂಡಿದ್ದಾರೆ ಎಂದು ಉರ್ವಶಿ ತಿಳಿಸಿದ್ದಾರೆ.