ಉವೈಸಿ ಕೂಡ ಇನ್ನು ಹನುಮಾನ್ ಚಾಲೀಸಾ ಪಠಿಸಬೇಕಾಗುತ್ತದೆ- ಕಪಿಲ್ ಮಿಶ್ರ

0
921

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 4: ಅಲ್ಪಸಂಖ್ಯಾತರ ಶೇ. 20 ಮತ ಬ್ಯಾಂಕ್ ಎಂಬ ರಾಜಕೀಯಕ್ಕೆ ಬಿಜೆಪಿಯ ಒಗ್ಗಟ್ಟು ಗೋರಿ ತೋಡಲಿದೆ ಎಂದು ದಿಲ್ಲಿಯ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರ ಹೇಳಿದ್ದಾರೆ. ಬಿಜೆಪಿ ಭಾರೀ ಬಹುಮತದಿಂದ ವಿಜಯ ಗಳಿಸಲಿದೆ ಎಂದು ಅರವಿಂದ್ ಕೇಜ್ರಿವಾಲ್‍ರಂತೆ ಅಸದುದ್ದೀನ್ ಉವೈಸಿ ಕೂಡ ಹನುಮಾನ್ ಚಾಲಿಸ್ ವಾಚಿಸಬೇಕಾಗಿ ಬರುವುದೆಂದು ಕಪಿಲ್ ಶರ್ಮ ಟ್ವೀಟ್ ಮಾಡಿದ್ದಾರೆ.

‘ಕೇಜ್ರಿವಾಲ್ ಹನುಮಾನ್ ಚಾಲಿಸ್ ವಾಚಿಸಲು ತೊಡಗಿದರು. ಇನ್ನು ಮುಂದೆ ಉವೈಸಿ ಹನುಮಾನ್ ಚಾಲಿಸ್ ವಾಚಿಸಲಿದ್ದಾರೆ. ಅದು ನಮ್ಮ ಒಗ್ಗಟ್ಟಿನ ಶಕ್ತಿಯಾಗಿದೆ. ನೀವು ಒಟ್ಟಾಗಿ ನಿಂತು ಏಕ ಶಕ್ತಿಯಾಗಿ ಮತದಾನ ಮಾಡುವಿರಿ. ನಮ್ಮ ಈ ಒಗ್ಗಟ್ಟು ಶೇ. 20 ಮತ ಬ್ಯಾಂಕ್ ಎಂಬ ನಾಚಿಗೇಡು ರಾಜಕೀಯಕ್ಕೆ ಗೋರಿ ತೋಡುತ್ತಿದೆ ಎಂದು ಕಪಿಲ್ ಮಿಶ್ರ ಟ್ವೀಟ್ ಮಾಡಿದ್ದಾರೆ. ಫೆಬ್ರವರಿ ಎಂಟರಂದು ದಿಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮತ್ತು ದಿಲ್ಲಿ ಮಾಡೆಲ್ ಟೌನ್ ಕ್ಷೇತ್ರದಿಂದ ಕಪಿಲ್ ಮಿಶ್ರ ದಿಲ್ಲಿ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ದಿಲ್ಲಿ ಮಿನಿ ಪಾಕಿಸ್ತಾನ ಆಗಿದೆ ಎಂಬ ಹೇಳಿಕೆಯನ್ನು ಕಪಿಲ್ ಮಿಶ್ರ ನೀಡಿದ್ದರು.