ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾರಿಂದ ಭಾರತಕ್ಕೆ ಅಧೀಕೃತ ಭೇಟಿ

0
528

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.3:ನಾಲ್ಕು ದಿವಸಗಳ ಅಧೀಕೃತ ಭೇಟಿಗಾಗಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಬಂದರು. ವರ್ಲ್ಡ್ ಇಕನಾಮಿಕ್ ಫಾರಂ ಆಯೋಜಿಸಿದ ಇಂಡಿಯನ್ ಇಕನಾಮಿಕ್ ಫಾರಂ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದಾರೆ.

ಅಕ್ಟೋಬರ್ 5 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಶೇಖ್ ಹಸೀನಾ ಸಮಾಲೋಚನೆ ನಡೆಸಲಿದ್ದಾರೆ. ಸಂದರ್ಶನದ ಭಾಗವಾಗಿ ಎರಡು ಕಡೆಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಮಾಡಲಿದ್ದಾರೆ. ಭಾರತ-ಬಾಂಗ್ಲಾ ಜಂಟಿಯಾಗಿ ಮೂರು ಯೋಜನೆಗಳನ್ನು ಮೋದಿ, ಹಸೀನಾ ಸೇರಿ ಮಾಡಲಿರುವರು.
ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆ ಆದ ಬಳಿಕ ಹಸೀನಾ ಮೊದಲ ಸಲ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.