ಕಾಶ್ಮೀರ: ಹಗಲು ನಿಯಂತ್ರಣ ಸಡಿಲಿಸಿದರೂ ತೆರೆಯದ ಅಂಗಡಿಗಳು!

0
530

ಸನ್ಮಾರ್ಗ ವಾರ್ತೆ

ಶ್ರೀನಗರ,ಸೆ.4: ಕಾಶ್ಮೀರದ ಹೆಚ್ಚಿನ ಸ್ಥಳಗಳಲ್ಲಿ ಹಗಲಿನಲ್ಲಿ ನಿಯಂತ್ರಣಗಳನ್ನು ಸಡಿಲಿಕೆಗೊಳಿಸಿದರೂ ಅಂಗಡಿಗಳು ತೆರೆದಿಲ್ಲ. ಸಾರ್ವಜನಿಕ ವಾಹನಗಳು ಹೊರ ಬರಲಿಲ್ಲ. ಕಾಶ್ಮೀರದ ವಿಶೇಷ ಸ್ಥಾನಮಾನ ತೆರವು ಮಾಡಿದ ಆಗಸ್ಟ್ ಐದರಿಂದ ಅಂಗಡಿಗಳು ಮುಚ್ಚಿಕೊಂಡಿವೆ.

ಪರಿಸ್ಥಿತಿ ಉತ್ತಮವಾಗಿದ್ದರಿಂದ 92 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಯಂತ್ರಣಗಳಿಗೆ ಸಡಿಲಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೆಲವು ಸ್ಥಳಗಳಲ್ಲಿ ಖಾಸಗಿ ವಾಹನಗಳು ಆಟೋಗಳು ಓಡಾಡುತ್ತಿವೆ. ಶ್ರೀನಗರದ ಲಾಲ್‌ಚೌಕ್ ಸಹಿತ ಕೆಲವು ಭಾಗಗಳಲ್ಲಿ ಕೆಲವು ರಸ್ತೆಗಳಲ್ಲಿ ವ್ಯಾಪಾರಿಗಳು ಇದ್ದಾರೆ.

ಹೆಚ್ಚಿನ ಕಡೆಗಳಲ್ಲಿ ಬ್ಯಾರಿಕೇಡ್‍ಗಳನ್ನು ತೆರವುಗೊಳಿಸಲಾಗಿದ್ದರೂ ಭದ್ರತಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿಲ್ಲ. ಆದರೆ, ಮೊಬೈಲ್, ಇಂಟರ್ನೆಟ್ ಸರ್ವಿಸ್‍ಗಳ ನಿಯಂತ್ರಣ ಹಾಗೆಯೇ ಮುಂದುವರಿದಿದೆ.