ಜಮ್ಮು,ಆ.17: ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ಗುಂಟು ಹಾರಾಟದಲ್ಲಿ ಭಾರತೀಯ ಯೋಧ ವೀರಮೃತ್ಯುವನ್ನಪ್ಪಿದ್ದಾನೆ. ಡೆಹ್ರಾಡೂನ್ನ ನಿವಾಸಿ ಲ್ಯಾನ್ಸ್ ನಾಯಿಕ್ ಸಂದೀಪ್ ಥಾಪ(35) ವೀರಮೃತ್ಯುವನ್ನಪ್ಪಿದ ಯೋಧ.
ಬೆಳಗ್ಗೆ ಆರು ಗಂಟೆಗೆ ರಜೌರಿ ಜಿಲ್ಲೆಯ ನೌಷಾರ ಸೆಕ್ಟರ್ನಲ್ಲಿ ಪಾಕಿಸ್ತಾನ ಸೇನೆ ಗುಂಡು ಹಾರಿಸಿತು. ಭಾರತ ಸೈನಿಕರ ಬಂಕರ್ ಮತ್ತು ಗ್ರಾಮಗಳನ್ನು ಗುರಿಯಿಟ್ಟು ಮೋಟಾರ್ ಸೆಲ್ ಮತ್ತು ಸಣ್ಣ ಆಯುಧಗಳನ್ನು ಬಳಸಿ ದಾಳಿ ನಡೆಸಲಾಗಿದೆ. ಭಾರತ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತದ ಗಡಿಭದ್ರತಾ ಪಡೆ ನಡೆಸಿದ ದಾಳಿಯಲ್ಲಿ ನಾಲ್ವರು ರೇಂಜರ್ಸ್ ಹತ್ಯೆಯಾಗಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿತ್ತು. ಆರೋಪ ಹೊರಿಸಿದ ಎರಡು ದಿನಗಳ ಬಳಿಕ ಭಾರತದ ಪೋಸ್ಟ್ ಳಿಗೆ ಪಾಕಿಸ್ತಾನ ಪ್ರಚೋದನೆ ರಹಿತವಾಗಿ ಗುಂಡು ಹಾರಾಟ ನಡೆಸಿದೆ.












