ಕುದ್ರೋಳಿ| ಬ್ರೈಟ್ ಮೊಡೆಲ್ ಸ್ಕೂಲ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ

0
427

ಸನ್ಮಾರ್ಗ ವಾರ್ತೆ

ಕುದ್ರೋಳಿ : ಇಲ್ಲಿನ ಬ್ರೈಟ್ ಮೊಡೆಲ್ ಸ್ಕೂಲ್ ಗೆ 2023-24 ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಬಂದಿದೆ.

ಮರ್ಯಮ್ ಸಬಾ 579 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ತಂದಿದ್ದಾಳೆ. ಒಟ್ಟು 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 18 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್, 4 ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸ್, 4 ವಿದ್ಯಾರ್ಥಿಗಳು ಪಾಸ್ ಕ್ಲಾಸ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಉತ್ತಮ ಫಲಿತಾಂಶವನ್ನು ತಂದು ಶಾಲೆಯ ಕೀರ್ತಿ ಹೆಚ್ಚಿಸಿದ ಎಲ್ಲಾ ವಿಧ್ಯಾರ್ಥಿಗಳಿಗೆ ಮತ್ತು ಅದಕ್ಕಾಗಿ ಶ್ರಮ ವಹಿಸಿದ ಶಿಕ್ಷಕ ವೃಂದದವರಿಗೆ ಇಸ್ಲಾಮಿಯಾ ಅಸೋಸಿಯೇಷನ್ ಕುದ್ರೋಳಿಯ ಅಧ್ಯಕ್ಷರಾದ ಜಾವೆದ್ ಅಖ್ತರ್ ಹಾಗೂ ಪದಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕವಿತಾ ಜಲೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here