ಬಿ.ಸಿ.ರೋಡ್: ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಬಂಟ್ವಾಳ ಎಸ್.ವಿ.ಎಸ್ ವಿದ್ಯಾಗಿರಿ ಶಾಲೆಯ ವಿದ್ಯಾರ್ಥಿನಿ ಅನುಪಮಾ ಕಾಮತ್ ರವರನ್ನು ಜಿಐಒ ದ.ಕ. ವತಿಯಿಂದ ಸನ್ಮಾನಿಸಲಾಯಿತು.ಜಿ ಐ ಒ ರಾಜ್ಯಾಧ್ಯಕ್ಷೆ ಉಮೈರಾ ಬಾನು, ಮಂಗಳೂರು ವಲಯ ಸಂಚಾಲಕಿ ಆಶೂರ ಬೀವಿ,ಬಿ.ಸಿ.ರೋಡ್ ನ ಜಿ.ಐ.ಒ ಸದಸ್ಯೆ ದುರಫ್ ಶಾನ್ ಖಾನಂ,ಜಮಾಅತೆ ಇಸ್ಲಾಮಿ ಹಿಂದ್ ಬಿ.ಸಿ.ರೋಡ್ ಶಾಖೆ ಮಹಿಳಾ ವಿಭಾಗದ ಅಧ್ಯಕ್ಷೆ ಶಕೀಲ ಬಾನು ಹಾಗು ಬಂಟ್ವಾಳ ಶಾಖೆ ಮಹಿಳಾ ವಿಭಾಗದ ಅಧ್ಯಕ್ಷೆ ರಶೀದಾ ಮೊದಲಾದವರು ಉಪಸ್ಥಿತರಿದ್ದರು.
ವಿಟ್ಲ: ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ವಿಟ್ಲ ಜೇಸಿ ಶಾಲೆಯ ವಿದ್ಯಾರ್ಥಿನಿ ಚಿನ್ಮಯಿರವರನ್ನು ಜಿಐಒ ದ.ಕ. ವತಿಯಿಂದ ಸನ್ಮಾನಿಸಲಾಯಿತು.ಜಿ ಐ ಒ ಮಂಗಳೂರು ವಲಯ ಸಂಚಾಲಕಿ ಆಶೂರ ಬೀವಿ,ಹಾಜರ ಹೈದರ್,ಜಮಾಅತೆ ಇಸ್ಲಾಮಿ ಹಿಂದ್ ವಿಟ್ಲ ಶಾಖೆ ಮಹಿಳಾ ವಿಭಾಗದ ಅಧ್ಯಕ್ಷೆ ರಬಿಯಾ ರಹೀಂ ಮೊದಲಾದವರು ಉಪಸ್ಥಿತರಿದ್ದರು.













