ಕಾರ್ಪೊರೇಟ್ ಓಲೈಕೆಗಾಗಿ ಕೇಂದ್ರದಿಂದ ಕೃಷಿ ಕಾನೂನು: ಸ್ಟಾಲಿನ್

0
376

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳ್ನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಭ್ರಷ್ಟಾಚಾರ ವೀರನಾಗಿದ್ದಾರೆಂದು ಆರೋಪಿಸಿರುವ ಡಿಎಂಕೆ ನಾಯಕ ಎಂಕೆ ಸ್ಟಾಲಿನ್, ರೈತ ಹೋರಾಟದ ವಿರುದ್ಧ ಕೇಂದ್ರ ಸರಕಾರ ತೋರಿಸುವ ಅಸಡ್ಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.

ಕಾರ್ಪೊರೇಟ್ ಗಳ ಓಲೈಕೆಗಾಗಿ ಕೃಷಿ ಕಾನೂನು ಜಾರಿ ಮಾಡಲಾಗಿದೆ.‌ ಅದಕ್ಕೆ ಕೊರೋನದ ನೆಪ ಒಡ್ಡಲಾಯಿತು ಎಂದು ಅವರು ಹೇಳಿದರು.

ಸಿಎಂ ಪಳನಿ ಸ್ವಾಮಿ ಹೇಳಿಕೆ ಕೊಡುವುದರಲ್ಲಿ ಶೂರ, ಅವರು ಹೇಳಿಕೆ ಮಾತ್ರ ನೀಡುತ್ತಾರೆ ಎಂದು ವ್ಯಂಗ್ಯವಾಡಿದರು. ನಾನು ಅವರಿಗೆ ಭ್ರಷ್ಟಾಚಾರ ವೀರನೆಂಬ ಹೆಸರು ಕೊಡುತ್ತೇನೆ ಎಂದು ಸ್ಟಾಲಿನ್ ಹೇಳಿದರು.

ಜಾತ್ಯತೀತ ಪ್ರಗತಿಪರ ಸಖ್ಯದ ನೇತೃತ್ವದಲ್ಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಕವಾಗಿ ಒಂದು ದಿನ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದರು. ರೈತರಿಗೆ ಮೋಸ ಮಾಡುವ ಮೂರು ಕಾನೂನುಗಳನ್ನು ಹಿಂಪಡೆಯಬೇಕು. ಹಿಂಪಡೆಯುವವರೆಗೆ ದೇಶಾದ್ಯಂತ ಹೋರಾಟ ಹರಡುವಂತೆ ಮಾಡಿಕೊಳ್ಳಲಾಗುವುದು ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

ಕೊರೋನಾದ ಮರೆಯಲ್ಲಿ ಬಿಜೆಪಿ ಲಗುಬಗನೆ ಕೃಷಿ ಕಾನೂನು ಪಾಸು ಮಾಡಿದೆ. ರೈತರ ಬಗ್ಗೆ ಅವರಿಗೆ ಚಿಂತೆಯಿಲ್ಲ. ಬಿಜೆಪಿ, ಎಐಡಿಎಂಕೆ ರೈತ ವಿರೋಧಿಯಾಗಿದೆ. ಕಾರ್ಪೊರೇಟ್‍ಗಳಿಗೆ ಸಹಾಯ ಮಾಡಲು ಅವರಲ್ಲಿ ಅವಸರವಿದೆ ಎಂದು ಸ್ಟಾಲಿನ್ ಹೇಳಿದರು.