ಸಿಎಎ ಕಾನೂನು ನಿರಾಕರಿಸಲು ರಾಜ್ಯಗಳಿಂದ ಸಾಧ್ಯವಿಲ್ಲ: ಭೂಪಿಂದರ್ ಸಿಂಗ್ ಹೂಡ

0
531

ಸನ್ಮಾರ್ಗ ವಾರ್ತೆ

ಛತ್ತಿಸ್ ಗಡ, ಜ. 20: ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸಲಾಗದು ಎಂದು ಹೇಳಲು ರಾಜ್ಯಗಳಿಂದ ಸಾಧ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ ಬೆನ್ನಿಗೆ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ಕೂಡ ಹೇಳಿದ್ದಾರೆ. ಒಮ್ಮೆ ಪಾರ್ಲಿಮೆಂಟು ಒಂದು ಕಾನೂನು ಜಾರಿಗೊಳಿಸಿದರೆ ಅದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೇಳಲು ರಾಜ್ಯಗಳಿಗೆ ಸಂವಿಧಾನಿಕ ಹಕ್ಕಿಲ್ಲ. ಇದನ್ನು ಕಾನೂನು ರೀತಿಯಲ್ಲಿ ಪರಿಶೀಲಿಸಬೇಕಾಗಿದೆ ಎಂದು ಅವರು ಹೇಳಿದರು. ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸಲಾಗದು ಎಂದು ರಾಜ್ಯಗಳಿಗೆ ಹೇಳಲು ಆಗುವುದಿಲ್ಲ. ಹಾಗೆ ಹೇಳುವುದು ಸಂವಿಧಾನ ವಿರುದ್ಧ ಆಗುತ್ತದೆ ಎಂದು ಕಪಿಲ್ ಸಿಬಲ್ ಹೇಳಿದ್ದರು.

ನೀವು ಕಾನೂನನ್ನು ವಿರೋಧಿಸಬಹುದು. ವಿಧಾನಸಭೆಯಲ್ಲಿ ಪ್ರಸ್ತಾವ ತಂದು ಅದನ್ನು ಹಿಂಪಡೆಯಬೇಕೆಂದು ಸರಕಾರವನ್ನು ಆಗ್ರಹಿಸಬಹುದು. ಆದರೆ ಜಾರಿಗೊಳಿಸುವುದಿಲ್ಲ ಎಂದರೆ ಸಮಸ್ಯೆಯಾದೀತು. ರಾಜಕೀಯವಾಗಿ ಅದರ ವಿರುದ್ಧ ಹೋರಾಡುವುದು ಮಾತ್ರ ನಮಗಿರುವ ದಾರಿ ಎಂದು ಕೇರಳ ಲಿಟಚರೇಚರ್ ಫೆಸ್ಟ್ ನಲ್ಲಿ ಕಪಿಲ್ ಸಿಬಲ್ ಹೇಳಿದ್ದರು. ರಾಷ್ಟ್ರೀಯ ಸಂಘಟನೆ ಎಂಬ ನೆಲೆಯಲ್ಲಿ ಕಾಂಗ್ರೆಸ್ ಗೆ ಈ ಹೋರಾಟಕ್ಕೆ ನೇತೃತ್ವ ನೀಡಲು ಸಾಧ್ಯ. ಆದರೆ ಪಂಜಾಬ್ ಹೊರತಾದ ಕಾಂಗ್ರೆಸ್ ಆಡಳಿತವಿರುವಲ್ಲಿ ಪೌರತ್ವ ಕಾನೂನು ವಿರುದ್ಧ ನಿಲುವನ್ನು ಕಾಂಗ್ರೆಸ್ ಬಹಿರಂಗಪಡಿಸಿಲ್ಲ. ಪೌರತ್ವ ಕಾನೂನು ವಿರೋಧಿಸಲು ರಾಜ್ಯಗಳಿಂದ ಸಾಧ್ಯವಿಲ್ಲ ಎಂಬುದು ಸಿಬಲ್, ಭೂಪಿಂದರ್ ಸಿಂಗ್‍ರಂತಹವರ ನಿಲುವು ಆಗಿದೆ.