ಪ್ಯಾಲೆಸ್ತೀನ್‌ಗೆ ಬೆಂಬಲ: ಶೂ ನಿಷೇಧಿಸಿದಾಗ ಪ್ರತಿಭಟಿಸಲು ಹೊಸ ಮಾರ್ಗವನ್ನು ಕಂಡುಕೊಂಡ ಉಸ್ಮಾನ್ ಖ್ವಾಜಾ

0
1416

ಸನ್ಮಾರ್ಗ ವಾರ್ತೆ

ಪರ್ತ್: ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಟೆಸ್ಟ್‌ನಲ್ಲಿ ಪ್ಯಾಲೆಸ್ತೀನ್‌ನಲ್ಲಿ ಅನುಭವಿಸುತ್ತಿರುವ ನೋವನ್ನು ಬೆಂಬಲಿಸುವ ಘೋಷಣೆಗಳನ್ನು ಹೊಂದಿರುವ ಶೂಗಳನ್ನು ಧರಿಸುವುದನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಷೇಧಿಸಿದ ನಂತರ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಉಸ್ಮಾನ್ ಖ್ವಾಜಾ ಪ್ರತಿಭಟನೆಗೆ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.

ತನ್ನ ರಟ್ಟೆಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯದ ಆಟಗಾರ ಪೆಲಸ್ತೀನ್‍ಗೆ ಬೆಂಬಲ ಸೂಚಿಸಿದ್ದಾರೆ.

ಪೆಲಸ್ತೀನಿನ ಕುರಿತು ತನ್ನ ನಿಲುವಿಗೆ ವಿರುದ್ಧ ನಿಂತ ಐಸಿಸಿ ನಿಲುವನ್ನು ಪ್ರಶ್ನಿಸಿ ಉಸ್ಮಾನ್ ಖ್ವಾಜ ವೀಡಿಯೊ ಸಂದೇಶವನ್ನು ನೀಡಿದ್ದಾರೆ.

ಅವರು ತನ್ನ ಶೂನಲ್ಲಿ ಎಲ್ಲ ಮನುಷ್ಯರು ಸಮಾನರು, ಸ್ವಾತಂತ್ರ್ಯ ಅವರ ಹಕ್ಕಾಗಿದೆ ಎಂದು ಬರೆದಿದ್ದರು. ಈ ಶೂ ಹಾಕಿಕೊಂಡ ಆಡಬಾರದೆಂದು ಐಸಿಸಿ ಅವರಿಗೆ ಮುನ್ನೆಚ್ಚರಿಕೆ ನೀಡಿತ್ತು. ಶೂನಲ್ಲಿ ರಾಜಕೀಯ ಹೇಳಿಕೆ ಬರೆದಿಲ್ಲ. ನಾನು ಪಕ್ಷಪಾತ ಮಾಡುವುದೂ ಇಲ್ಲ ನನ್ನ ದೃಷ್ಟಿಯಲ್ಲಿ ಎಲ್ಲ ಮನುಷ್ಯರು ಸಮಾನರು ಆಗಿದ್ದಾರೆ ಎಂದವರು ಹೇಳಿದ್ದಾರೆ.

https://x.com/waqar_younas158/status/1735157912685912475?s=20