“ಪ್ಯಾಲೆಸ್ತೀನ್‌ಗೆ ಬೆಂಬಲ ನೀಡುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿ” – ಸೈಯದ್ ಸಾದತುಲ್ಲಾ ಹುಸೇನಿ

0
253

ಸನ್ಮಾರ್ಗ ವಾರ್ತೆ

24 ಅಕ್ಟೋಬರ್, ನವದೆಹಲಿ: ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಅದತುಲ್ಲಾ ಹುಸೈನಿ ಅವರು ಪ್ಯಾಲೆಸ್ತೀನ್‌ನ ಬೆಂಬಲವನ್ನು ಭಾರತದ ಅತ್ಯುತ್ತಮ ರಾಷ್ಟ್ರೀಯ ಹಿತಾಸಕ್ತಿ ಎಂದು ಬಣ್ಣಿಸಿದ್ದಾರೆ.

21 ಅಕ್ಟೋಬರ್ 2023 ರಂದು ನವದೆಹಲಿಯ ಜಮಾಅತೆ ಇಸ್ಲಾಮಿ ಹಿಂದ್‌ನ ಪ್ರಧಾನ ಕಛೇರಿಯಲ್ಲಿ ನಡೆದ ಸಾಪ್ತಾಹಿಕ ಕಾರ್ಯಕ್ರಮದಲ್ಲಿ ಗಾಜಾದ ಮೇಲೆ ನಡೆಯುತ್ತಿರುವ ಇಸ್ರೇಲಿ ಬಾಂಬ್ ದಾಳಿಯ ಕುರಿತು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ JIH ಅಧ್ಯಕ್ಷರು, ” ಪ್ಯಾಲೆಸ್ತೀನ್ ಸಮಸ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಾವು ಮಾಡಬೇಕಾದ ಪ್ರಮುಖ ಕೆಲಸ ಎಂದು ನಾನು ಭಾವಿಸುತ್ತೇನೆ.

ಸರ್ಕಾರಗಳು ಪ್ರತಿಭಟನೆ ಮತ್ತು ಮೆರವಣಿಗೆಗಳನ್ನು ನಿಲ್ಲಿಸಬಹುದು. ಅವರು ಪ್ರತಿಭಟನೆಯ ಎಲ್ಲಾ ಕಾರ್ಯಕ್ರಮಗಳನ್ನು ತಡೆಯಲು ಪ್ರಯತ್ನಿಸುತ್ತಿದೆ. ಯಾವುದೇ ಸಾರ್ವಜನಿಕ ಮೆರವಣಿಗೆ ಅಥವಾ ಚಟುವಟಿಕೆಯನ್ನು ಬಯಸುವುದಿಲ್ಲವೆಂದು ಈ ನಿಟ್ಟಿನಲ್ಲಿ ಅವರು ದೆಹಲಿಯ ಪರಿಸ್ಥಿತಿಗಳನ್ನು ಸೃಷ್ಟಿಸಿದ್ದಾರೆ. ಅವರು ಈ ಪ್ರತಿಭಟನೆಗಳನ್ನು ತಡೆಯಬಹುದು. ಆದರೆ ನೀವು ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಜನರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ನೈಜ ಮಾಹಿತಿಯನ್ನು (ಪ್ಯಾಲೆಸ್ತೀನ್ ಸಮಸ್ಯೆಯ ಬಗ್ಗೆ) ತಲುಪಿಸಬಹುದು.

ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಧ್ಯಮಗಳು ಹರಡಲು ಪ್ರಯತ್ನಿಸುವ ಮೂಲಕ ಇಡೀ ದೇಶದಲ್ಲಿ ಪ್ಯಾಲೆಸ್ತೀನ್ ಸಮಸ್ಯೆಯ ಬಗ್ಗೆ ವಿಶೇಷವಾದ ಪ್ರಭಾವ ಬೀರಲು ಪ್ರಯತ್ನಿಸುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಈ ದೇಶದ ಜನರ ಮುಂದೆ ವಾಸ್ತವವನ್ನು ಪ್ರಸ್ತುತ ಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.”

ಪ್ರಸ್ತುತ ಪ್ಯಾಲೆಸ್ತೀನ್ ವಿಶ್ವದ ಅತ್ಯಂತ ತುಳಿತಕ್ಕೊಳಗಾದ ರಾಷ್ಟ್ರವಾಗಿದೆ ಮತ್ತು ಪ್ರಸಕ್ತ ಇಸ್ರೇಲ್ ನಮ್ಮ ಆಧುನಿಕ ಇತಿಹಾಸದಲ್ಲಿ ಅತ್ಯಂತ ಕ್ರೂರ ಮತ್ತು ಅತ್ಯಂತ ಅನಾಗರಿಕ ದೇಶವಾಗಿದೆ ಎಂದು ಜನರಿಗೆ ತಿಳಿಸಬೇಕು. ಪ್ಯಾಲೆಸ್ತೀನಿಯರ ಮೇಲೆ ಅದು ನಡೆಸುತ್ತಿರುವ ದೌರ್ಜನ್ಯಕ್ಕೆ ಸರಿ ಸಾಟಿ ಇಲ್ಲ. ಇಸ್ರೇಲ್ ನಾಗರಿಕ ಜಗತ್ತು ದ್ವೇಷಿಸುವ ಎಲ್ಲಾ ಅನಿಷ್ಟಗಳ ಒಟ್ಟು ಸಂಗ್ರಹವಾಗಿದೆ. ಆಧುನಿಕ ಜಗತ್ತು ಸ್ಥಾಪಿಸಲ್ಪಟ್ಟ ಮತ್ತು ಬೆಳೆದು ಬಂದ ಎಲ್ಲಾ ಮೂಲಭೂತ ತತ್ವಗಳು ಮತ್ತು ಮೌಲ್ಯಗಳು ಪ್ಯಾಲೆಸ್ತೀನ್‌ನಲ್ಲಿ ಉಲ್ಲಂಘಿಸಲ್ಪಡುತ್ತಿವೆ. ಅದು ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಮಾನವ ಹಕ್ಕುಗಳು ಅಥವಾ ಜನಾಂಗೀಯ ಸಮಾನತೆಯೇ ಆಗಿರಲಿ, ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್‌ನ ಕೈಯಲ್ಲಿ ಈ ಎಲ್ಲಾ ಮೌಲ್ಯಗಳನ್ನು ತುಳಿಯಲ್ಪಡುತ್ತಿವೆ.

ಆದ್ದರಿಂದ ಪ್ಯಾಲೆಸ್ತೀನ್ ಸಮಸ್ಯೆ ಕೇವಲ ಒಂದು ದೇಶ, ರಾಷ್ಟ್ರದ ಸಮಸ್ಯೆಯಲ್ಲ, ಇದು ಇಡೀ ಮಾನವೀಯತೆಯ ಸಮಸ್ಯೆಯಾಗಿದೆ. ನಮ್ಮ ಮೌಲ್ಯಗಳನ್ನು ಈ ರೀತಿ ತುಳಿಯಲು ಬಿಟ್ಟರೆ, ಕಳೆದ ಇನ್ನೂರು ವರ್ಷಗಳಲ್ಲಿ ನಾವು ಸಾಧಿಸಿದ್ದನ್ನು ನಾವು ಗಾಜಾದ ಜೊತೆಗೆ ಹೂತು ನಾಶಪಡಿಸಿದಂತೆಯೇ ಸರಿ.

ಪ್ಯಾಲೆಸ್ತೀನಿಯರ ದುಃಸ್ಥಿತಿಯನ್ನು ವಿವರಿಸಿದ ಹುಸೇನಿ, “6 ಮಿಲಿಯನ್ ಜನರು, ಪ್ಯಾಲೆಸ್ತೀನ್‌ನಲ್ಲಿ ವಾಸಿಸುತ್ತಿದ್ದರೆ, ಬಹುತೇಕ ಅಷ್ಟೇ ಸಂಖ್ಯೆಯ ಜನರು ವಿಶ್ವದ ವಿವಿಧ ಭಾಗಗಳಲ್ಲಿ ನಿರಾಶ್ರಿತರಾಗಿ ದುಃಖದ ಜೀವನವನ್ನು ನಡೆಸುತ್ತಿದ್ದಾರೆ ಎಂದು ನಾವು ಜನರಿಗೆ ತಿಳಿಸಬೇಕಾಗಿದೆ. ಕಳೆದ 75 ವರ್ಷಗಳಿಂದ ಯಾವುದೇ ಯುದ್ಧವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಿರಾಶ್ರಿತರನ್ನು ಹುಟ್ಟುಹಾಕಿಲ್ಲ. ಮತ್ತು ಪ್ಯಾಲೆಸ್ತೀನ್ ನ ಒಳಗೆ ವಾಸಿಸುತ್ತಿರುವ ಆರು-ಏಳು ಮಿಲಿಯನ್ ಪ್ಯಾಲೆಸ್ತೀನಿಯರೂ, ತೆರೆದ ಜೈಲುಗಳಂತಿರುವ ಸಣ್ಣ ಘೆಟ್ಟೋಗಳಲ್ಲಿ ವಾಸಿಸುತ್ತಿದ್ದಾರೆ
ಮತ್ತು ಈ ಜೈಲುಗಳಲ್ಲಿಯೂ ಅವರು ಸುರಕ್ಷಿತವಾಗಿಲ್ಲ. ಪ್ರತಿ ವರ್ಷ ಪ್ಯಾಲೆಸ್ಟೀನಿಯರ ಮನೆಗಳ ಮೇಲೆ ಬಾಂಬ್ ದಾಳಿ ಮಾಡಲಾಗುತ್ತದೆ. ಮಕ್ಕಳು ಸಾಯುತ್ತಾರೆ, ಶಾಲೆಗಳು ಮತ್ತು ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ಮಾಡಲಾಗುತ್ತದೆ. ಪ್ರತಿ ವರ್ಷ ಸಾವಿರಾರು ಮಹಿಳೆಯರು ಮತ್ತು ಮಕ್ಕಳನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಲಾಗುತ್ತಿದೆ. ಇದು ವರ್ಷಗಳಿಂದ ನಿರಂತರವಾಗಿ ನಾಗರಿಕ ಜಗತ್ತಿನ ಕಣ್ಣ ಮುಂದೆ ನಡೆಯುತ್ತಿದ್ದು, ಇದಕ್ಕೆ ಮೂಕಪ್ರೇಕ್ಷಕ ಮತ್ತು ಮೌನವಾಗಿರುವುದು ನಮ್ಮ ಇಡೀ ನಾಗರಿಕತೆಯ ಮರಣದ ಕರೆ ಗಂಟೆಯಂತಿದೆ.

ಭಾರತದ ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಮಾತನಾಡುತ್ತಾ, ಜಮಾಅತ್ ಮುಖ್ಯಸ್ಥರು, “ಪ್ಯಾಲೆಸ್ತೀನ್ ಅನ್ನು ಬೆಂಬಲಿಸುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿ ಎಂದು ನಾವು ನಮ್ಮ ದೇಶದ ಜನರಿಗೆ ಹೇಳಬೇಕು. ವಿಷಯವು ಕೇವಲ ಮಾನವ ಹಕ್ಕುಗಳ ವಿಷಯವಲ್ಲ , ನಮ್ಮ ರಾಷ್ಟ್ರೀಯ ಹಿತಾಸಕ್ತಿಯೂ ಆಗಿದೆ. ನಮ್ಮ ರಾಷ್ಟ ಸ್ಥಾಪಿಸಲ್ಪಟ್ಟಿರುವ ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು ಸಮಾನವಾಗಿದ್ದು ಪ್ಯಾಲೆಸ್ತೀನಿಯನ್ ಕಾರಣವನ್ನು ಬೆಂಬಲಿಸಬೇಕಾದುದು ಆ ಮೌಲ್ಯಗಳ ಬೇಡಿಕೆಯಾಗಿದೆ. ನಾವು ತುಳಿತಕ್ಕೊಳಗಾದ ಫೆಲಸ್ತೀನರನ್ನು ಬೆಂಬಲಿಸದಿದ್ದರೆ ನಾವು ನಮ್ಮ ದೇಶದ ವಿರುದ್ಧ, ನಮ್ಮ ಮೌಲ್ಯಗಳ ವಿರುದ್ಧ , ನಮ್ಮ ಇತಿಹಾಸದ ವಿರುದ್ಧ , ನಮ್ಮ ರಾಷ್ಟ್ರದ ಶ್ಲಾಘನೀಯ ಪರಂಪರೆಯ ವಿರುದ್ಧ ನಾವು ಬಂಡಾಯವೆದ್ದಂತೆಯೇ ಸರಿ. ಇವೆಲ್ಲವುಗಳ ಬಗ್ಗೆ ದೇಶದ ಜನರಿಗೆ ಬಹಳ ಮನವರಿಕೆಯಾಗುವ ರೀತಿಯಲ್ಲಿ ಬಲವಾಗಿ ತಿಳಿಸಬೇಕು.”

ಗ್ಲೋಬಲ್ ಸೌತ್‌ನ ನಾಯಕನಾಗಲು ನಮ್ಮ ದೇಶಕ್ಕೆ
ಸುವರ್ಣಾವಕಾಶವನ್ನು ಸೂಚಿಸಿದ JIH ಅಧ್ಯಕ್ಷರು, “ಅಭಿವೃದ್ಧಿ ಹೊಂದಿದ ಜಗತ್ತು ನಮ್ಮ ದೇಶವನ್ನು ತನ್ನ ನಾಯಕನನ್ನಾಗಿ ಮಾಡುವುದಿಲ್ಲ, ಅಮೇರಿಕಾ ನಮ್ಮನ್ನು ತನ್ನ ನಾಯಕನನ್ನಾಗಿ ಮಾಡುವುದಿಲ್ಲ, ಹಲವು ವರ್ಷಗಳಿಂದ ಈ ಅಭಿವೃದ್ಧಿಶೀಲ ರಾಷ್ಟ್ರಗಳ ಗುಂಪಾಗಿರುವ ದಕ್ಷಿಣದ ಜಗತ್ತನ್ನು ನಾವು ಮುನ್ನಡೆಸಿದ್ದೇವೆ. ಪ್ಯಾಲೆಸ್ತೀನ್ ಸಮಸ್ಯೆಯು ನೀಡಿದ ಈ ಒಂದು ಸುವರ್ಣ ಅವಕಾಶವನ್ನು ಬಳಸಿ ನಮ್ಮ ದೇಶವು ದಕ್ಷಿಣ ಜಗತ್ತನ್ನು ಮುನ್ನಡೆಸಬಹುದಿತ್ತು ಮತ್ತು ಸಾಮ್ರಾಜ್ಯಶಾಹಿ ಮತ್ತು ದಬ್ಬಾಳಿಕೆಯ ವಿರುದ್ಧ ಅತ್ಯಂತ ಶಕ್ತಿಶಾಲಿ ಧ್ವನಿಯಾಗಬಹುದಿತ್ತು, ಅದನ್ನು ಇಂದಿಗೂ ಮಾಡಬಹುದು, ಈ ಅವಕಾಶವನ್ನು ಕಳೆದುಕೊಳ್ಳುತ್ತಿರುವವರು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೆಲ್ಲ ದೇಶದ ಜನತೆಗೆ ಮನವರಿಕೆಯಾಗುವ ರೀತಿಯಲ್ಲಿ ತಿಳಿಸಬೇಕು. ಆಗ ನಮ್ಮ ದೇಶದಲ್ಲಿ ಪ್ಯಾಲೆಸ್ತೀನ್ ಸಮಸ್ಯೆ ಬಗ್ಗೆ ಜಾಗೃತಿ ಮೂಡುತ್ತದೆ. ಪೆಲಸ್ತೀನ್ ವಿಷಯದಲ್ಲಿ ನಾವು ಸದಾ ಚಾರಿತ್ರಿಕ ಪಾತ್ರ ವಹಿಸಿದ್ದೇವೆ. ನಾವು ಮತ್ತೊಮ್ಮೆ ಈ ಪಾತ್ರವನ್ನು ವಹಿಸಲು ಮುಂದಾದರೆ, ಈ ದೇಶದಲ್ಲಿ ಪ್ಯಾಲೆಸ್ತೀನ್ ಸಹೋದರರಿಗೆ ನಾವು ಸಲ್ಲಿಸಬಹುದಾದ ಶ್ರೇಷ್ಠ ಸೇವೆಯಾಗಿದೆ ಎಂದು ನಾನು ಭಾವಿಸುತ್ತೇನೆ.

ಈ ಹಿಂದೆ ಸಾದತುಲ್ಲಾ ಹುಸೇನಿ ಅವರು ಪ್ಯಾಲೆಸ್ತೀನ್ ಕುರಿತು ಕೆಸಿ ತ್ಯಾಗಿ ಅವರ ಅಮೂಲ್ಯವಾದ ಅಭಿಪ್ರಾಯಗಳಿಗಾಗಿ ಧನ್ಯವಾದಗಳನ್ನು ಅರ್ಪಿಸಿದರು. ಶ್ರೀ ತ್ಯಾಗಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, “ನಮ್ಮ ದೇಶದಲ್ಲಿ ಪ್ಯಾಲೆಸ್ತೀನ್‌ಗಾಗಿ ನೀವು ಅತ್ಯಂತ ಶಕ್ತಿಯುತ ಧ್ವನಿಯಾಗಿರುವುದರಿಂದ ನಾವು ನಿಮಗೆ ಕೃತಜ್ಞರಾಗಿರುತ್ತೇವೆ. ನೀವು ಸಂಸದರು ಮತ್ತು ಮಾಧ್ಯಮಗಳಲ್ಲಿ ಪ್ಯಾಲೆಸ್ತೀನ್ ಸಮಸ್ಯೆಯ ಬಗ್ಗೆ ಸಜ್ಜುಗೊಳಿಸಲು ಮತ್ತು ಜಾಗೃತಿ ಮೂಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುವುದನ್ನು ನಾವು ನೋಡುತ್ತೇವೆ. ಇದು ನಮ್ಮ ಜವಾಬ್ದಾರಿ ಮತ್ತು ನೀವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದರಿಂದ ನೀವು (ಕೆಸಿ ತ್ಯಾಗಿ ಸಾಹಬ್) ನಮ್ಮೆಲ್ಲರ ಧನ್ಯವಾದಗಳಿಗೆ ಅರ್ಹರು.

ಜಾರಿಗೊಳಿಸಿದವರು:
ಕೆ.ಕೆ. ಸುಹೇಲ್
ರಾಷ್ಟ್ರೀಯ ಕಾರ್ಯದರ್ಶಿ, ಮಾಧ್ಯಮ ವಿಭಾಗ
ಜಮಾಅತೆ ಇಸ್ಲಾಮಿ ಹಿಂದ್, ಕೇಂದ್ರ ಕಚೇರಿ
ನವದೆಹಲಿ.