ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಕೋರಿ ಸಲ್ಲಿಸಿದ ಅರ್ಜಿಯನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್

0
433

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಫೆ.8: ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಆಗ್ರಹಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟು ತಳ್ಳಿಹಾಕಿದೆ. ಸಂವಿಧಾನದ 356ನೇ ವಿಧಿ ಜಾರಿಗೊಳಿಸಬೇಕೆಂದು ವಕೀಲ ಸಿ.ಆರ್ ಜಯಸುಕಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

ರಾಜ್ಯದಲ್ಲಿ ಅಲ್ಪಸಂಖ್ಯಾತರೊಂದಿಗೆ ತಾರತಮ್ಯ, ದಲಿತರ ಮೇಲೆ ದೌರ್ಜನ್ಯವನ್ನು ವಕೀಲರು ಬೆಟ್ಟುಮಾಡಿದ್ದರು. ಆದರೆ ಯಾವ ಆಧಾರದಲ್ಲಿ ಇಂತಹ ವಾದ ಮಂಡಿಸುತ್ತಿದ್ದೀರಿ ಎಂದು ಚೀಫ್ ಜಸ್ಟಿಸ್ ಎಸ್.ಎ. ಬೊಬ್ಡೆ ವಕೀಲರನ್ನು ಕೇಳಿದರು. ಎಷ್ಟು ರಾಜ್ಯಗಳ ಅಪರಾಧ ಕೃತ್ಯಗಳ ಲೆಕ್ಕವನ್ನು ಅಧ್ಯಯನ ಮಾಡಿದ್ದೀರಿ. ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುವುದು ಹೇಗೆ ಎಂದು ಕೇಳಿದರು.

ರಾಜ್ಯದಲ್ಲಿ ಕಾನೂನು ವಿರೋಧಿ ಚಟುವಟಿಕೆಗಳು ನಡೆಯುತ್ತಿದೆ. ಪೊಲೀಸರು ಶಾಮಿಲಾದ ಕೊಲೆಕೃತ್ಯ ಹೆಚ್ಚುತ್ತಿದೆ. ಮಾಧ್ಯಮ ಸ್ವಾಂತ್ರದ ಮೇಲೆ ನಿಯಂತ್ರಣವಿದೆ. ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ ಎಂದು ವಕೀಲರು ಅರ್ಜಿಯಲ್ಲಿ ಹೇಳಿದ್ದರು. ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವಕೀಲರು ಅರ್ಜಿಯಲ್ಲಿ ಎತ್ತಿ ತೋರಿಸಿದ್ದರು.