ಹೊಸದಿಲ್ಲಿ,ಮೇ 9: ಅಸ್ಸಾಂನ ಪೌರತ್ವ ಪಟ್ಟಿ ಜುಲೈ 31ರ ಮೊದಲು ತಯಾರಿಸಬೇಕೆಂದು ಸುಪ್ರೀಂಕೋರ್ಟು ಆದೇಶಿಸಿದೆ. ಈ ವಿಷಯದಲ್ಲಿ ಧೈರ್ಯದಿಂದ ಮುಂದುವರಿಯುವಂತೆ ಅಧಿಕಾರಿಗಳಿಗೆ ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅಧ್ಯಕ್ಷತೆ ಪೀಠ ಸೂಚಿಸಿತು. ಕರಡು ಪಟ್ಟಿಯಿಂದ(ಎನ್ಆರ್ಸಿ) ಹೊರಗದ ನಲ್ವತ್ತು ಲಕ್ಷ ಮಂದಿಯಲ್ಲಿ ಹಲವರು ತಮ್ಮ ವಾದವನ್ನು ಮಂಡಿಸಲು ಕರೆದೂ ಬಂದಿಲ್ಲ ಎಂದು ಅಸ್ಸಾಂ ಎನ್ಆರ್ಸಿ ಕೋ-ಆರ್ಡಿನೇಟರ್ ಪ್ರತೀಶ್ ಹಲೋಜ ತಿಳಿಸಿದರು. ಆಗ ಕೋರ್ಟು ಧೈರ್ಯದಿಂದ ಮುಂದುವರಿಯುವಂತೆ ಅವರಿಗೆ ಸೂಚಿಸಿತು.
ಪೌರತ್ವ ಸಾಬೀತಿಗೆ ಹಾಜರಗದವರ ವಿಷಯದಲ್ಲಿ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಚೀಫ್ ಜಸ್ಟಿಸ್ ಗೊಗೊಯಿ ಹೇಳಿದರು. ಸುಪ್ರೀಂ ಕೋರ್ಟು ಬೇಸಿಗೆ ರಜೆ ಇದ್ದರೂ ತುರ್ತು ಆಗಿ ವಿಚಾರಣೆ ನಡೆಸಲು ರಿಜಿಸ್ಟಾರ್ರನ್ನು ಸಮೀಪಿಸಬೇಕೆಂದು ಎನ್ಆರ್ಸಿ ಕೋ-ಆರ್ಡಿನೇಟರ್ಗೆ ಸುಪ್ರೀಂಕೋರ್ಟು ಸೂಚಿಸಿದೆ. ಅಸ್ಸಾಂನ ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಪ್ರಕರಣದ ವಿಚಾರಣಾ ಪೀಠದಿಂದ ಹಿಂದೆ ಸರಿಯಬೇಕೆಂದು ಮಾನವ ಹಕ್ಕು ಕಾರ್ಯಕರ್ತರಾದ ಹರ್ಷ ಮಂದರ್ ಆಗ್ರಹಿಸಿದರೂ ಗೊಗೊಯಿ ಅದಕ್ಕೆ ಸಜ್ಜಾಗಿರಲಿಲ್ಲ. ಪೌರತ್ವ ಪಟ್ಟಿಯ ಸೂಕ್ತ ಪುರಾವೆ ಇದ್ದೂ ಅಸ್ಸಾಮೀಸ್ ವಂಶದ ಅಧಿಕಾರಿಗಳಿಂದ ಗಂಭೀರ ಲೋಪದಿಂದಾಗಿ ಕರಡು ಪೌರತ್ವ ಪಟ್ಟಿಯಿಂದ 40 ಲಕ್ಷ ಮಂದಿ ಹೊರಗಾಗಿದ್ದಾರೆ ಎನ್ನಲಾಗುತ್ತಿದೆ.












