ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ: ಸುಪ್ರೀಂಕೋರ್ಟಿನಲ್ಲಿ ಇಂದು ವಿಚಾರಣೆ

0
333

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ. 16: ಜಮ್ಮು-ಕಾಶ್ಮೀರದ ವಿಶೇಷ ಅಧಿಕಾರ ನೀಡುವ ಸಂವಿಧಾನದ 370ನೇ ಪರಿಚ್ಛೇದವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟು ಇಂದು ವಿಚಾರಣೆಗೆ ಎತ್ತಿಕೊಳ್ಳಲಿದೆ. ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ನೇತೃತ್ವದ ಎಸ್‍.ಎ ಬೊಬ್ಡೆ, ಎಸ್‍. ಅಬ್ದುಲ್ ನಝೀರ್ ಸುಪ್ರೀಂಕೋರ್ಟು ವಿಶೇಷ ಪೀಠವು ಪ್ರಕರಣವನ್ನು ಪರಿಗಣಿಸಲಿದೆ. ಇದಲ್ಲದೇ ಜಮ್ಮು-ಕಾಶ್ಮೀರದಲ್ಲಿ ಮಾಧ್ಯಮಗಳಿಗೆ ನಿಷೇಧ ಹೇರಲಾದ ಕುರಿತ ಅರ್ಜಿಯನ್ನು ಕೂಡ ಇಂದು ಸುಪ್ರೀಂಕೋರ್ಟು ಪರಿಗಣಿಸಲಿದೆ.

ಜಮ್ಮು-ಕಾಶ್ಮೀರದ 370 ವಿಧಿ ರದ್ದುಪಡಿಸಿರುವುದನ್ನು ಬೆಟ್ಟು ಮಾಡಿ ವಕೀಲ ಎಂ.ಎಲ್ ಶರ್ಮ ಮತ್ತು ಮಾಧ್ಯಮಗಳಿಗೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಕಾಶ್ಮೀರ್ ಟೈಮ್ಸ್ ಸಂಪಾದಕಿ ಅನುರಾಧ ಭಾಸಿ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಆರ್ಟಿಕಲ್ 370 ರದ್ದುಪಡಿಸಿರುವುದನ್ನು ಪ್ರಶ್ನಿಸಿ ನ್ಯಾಶನಲ್ ಕಾನ್ಫೆರೆನ್ಸ್ ಸಂಸದರಾದ ಅಕ್ಬರ್ ಲೋನ್, ಹಸ್ನಿಯನ್ ಮಸೂದ್ ಹಾಗೂ ಎನ್‍ಸಿಪಿ ಸುಪ್ರೀಂಕೋರ್ಟಿನ ಮೊರೆಹೋಗಿದೆ. ಪಾರ್ಲಿಮೆಂಟು ಪಾಸು ಮಾಡಿರುವ ಜಮ್ಮು-ಕಾಶ್ಮೀರ ರಿ ಆರ್ಗನೈಸನೇಶನ್ ಆಕ್ಟ್ ಸುಪ್ರೀಂಕೋರ್ಟು ಪರಿಶೀಲಿಸಬೇಕೆಂದು ಆಗ್ರಹಿಸಲಾಗಿದೆ.ಜಮ್ಮು-ಕಾಶ್ಮೀರವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಿದ ಕೇಂದ್ರ ಸರಕಾರದ ಕ್ರಮವನ್ನು ಅರ್ಜಿಯಲ್ಲಿ ಪರಾಮರ್ಶಿಸಲಾಗಿದೆ.