ಪ್ರವಾದಿ ಮುಹಮ್ಮದ್(ಸ)ರ ಸಂದೇಶವನ್ನೇ ಮೋದಿಯವರು ಜಾರಿಗೊಳಿಸುತ್ತಿದ್ದಾರೆ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸಿದ್ದೀಕಿ

0
754

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪ್ರವಾದಿ ಮುಹಮ್ಮದರ(ಸ) ಸಂದೇಶಗಳನ್ನೇ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಜಾರಿಗೊಳಿಸುತ್ತಿದ್ದಾರೆ ಮಎಂದು ಬಿಜೆಪಿ ನಾಯಕ, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದೀಕಿ ಹೇಳಿದ್ದಾರೆ ಎಂಬುದಾಗಿ ದಿ ಪ್ರಿಂಟ್ ವರದಿ ಮಾಡಿದೆ. ಸ್ವಚ್ಛ ಭಾರತ್ ಅಭಿಯಾನ್, ಬೇಟಿ ಬಚಾವೊ ಬೇಟಿ ಪಡಾವೊ, ಸ್ಟಾರ್ಟಪ್ ಇಂಡಿಯಾ ಮುಂತಾದ ಯೋಜನೆಗಳು ಇಸ್ಲಾಮೀ ಬೋಧನೆಯ ಪ್ರಕಾರವಿದೆ ಎಂದು ಸಿದ್ದೀಕಿ ಹೇಳಿದರು.

ಸ್ವಚ್ಛತೆ ಇಸ್ಲಾಮಿನ ಅವಿಭಾಜ್ಯ ಅಂಗವಾಗಿದೆ. ಸ್ವಚ್ಛತೆ ವಿಶ್ವಾಸದ ಅರ್ಧಾಂಶವೆಂದು ಪ್ರವಾದಿ(ಸ) ಕಲಿಸಿದ್ದಾರೆ. ಆದರೆ ಇಷ್ಟು ವರ್ಷಗಳಲ್ಲಿ ಒಂದೇ ಒಂದು ಶುಚಿತ್ವದ ರಾಷ್ಟ್ರೀಯ ಅಭಿಯಾನ ನಡೆದಿರಲಿಲ್ಲ. ಅದನ್ನು ಮೋದಿಯವರು ಆರಂಭಿಸಿದರು. ಇಸ್ಲಾಮ್ ಅಂಗೀಕರಿಸುವ ಎಲ್ಲ ವಿಷಯಗಳನ್ನು ಪ್ರಧಾನಿ ಮೋದಿ ಜಾರಿಗೊಳಿಸುತ್ತಿದ್ದಾರೆ ಎಂದು ಸ್ವಚ್ಛ್ ಭಾರತ್ ಅಭಿಯಾನವನ್ನು ಬೆಟ್ಟು ಮಾಡಿ ಅವರು ಹೇಳಿದರು.

ಪ್ರವಾದಿ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಜೀವಂತ ಮಣ್ಣಿನಲ್ಲಿ ಹೂಳಲಾಗುತ್ತಿತ್ತು. ಈಗ ಜನರು ಹೆಣ್ಣು ಮಕ್ಕಳನ್ನು ಗರ್ಭದಲ್ಲಿಯೇ ಕೊಲ್ಲುತ್ತಿದ್ದರು. ಈ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ಪ್ರವಾದಿ ಜನರೊಡನೆ ಹೇಳಿದರು. ಹೆಣ್ಣು ಶಿಶು ಹತ್ಯೆಯನ್ನು ವಿರೋಧಿಸಿ ಪವಿತ್ರ ಕುರ್‌ಆನ್ ಶಕ್ತವಾಗಿ ಸೂಚಿಸಿದೆ. ಬೇಟಿ ಬಚಾವೊ, ಬೇಟಿ ಪಡಾವೊ ಎಂಬ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಯಾನ ಹಮ್ಮಿಕೊಂಡರು. ಇದು ಹೆಣ್ಣು ಮಕ್ಕಳನ್ನು ರಕ್ಷಿಸಲು ಮಾತ್ರವಲ್ಲ ಅವಳಿಗೆ ಶಿಕ್ಷಣ ಕೊಡಲು ಆದ್ಯತೆ ಕೊಟ್ಟಿದೆ ಎಂದು ಸಿದ್ದೀಕಿ ಹೇಳಿದರು.