ತಬ್ ಲೀಗ್ ನೆಪದಲ್ಲಿ ಮುಸ್ಲಿಮ್ ನಿಂದನೆ: ಅವರ ದೇಹ ಆರೋಗ್ಯದಲ್ಲಿರಬಹುದು, ಆದರೆ ಮನಸು ರೋಗಗ್ರಸ್ತವಾಗಿದೆ- ಉಮರ್ ಅಬ್ದುಲ್ಲ

0
2908

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ.1: ತಬ್ಲೀಗ್ ಸಮ್ಮೇಳನದಲ್ಲಿ ಭಾಗವಹಿಸಿದವರಿಗೆ ಕೊರೊನಾ ರೋಗ ತಗಲಿದ ಘಟನೆಯನ್ನು ನೆಪಮಾಡಿಕೊಂಡು ಕೆಲವರು ಮುಸ್ಲಿಮರನ್ನು ಆಕ್ಷೇಪಿಸುತ್ತಿದ್ದಾರೆ ಎಂದು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ನ್ಯಾಶನಲ್ ಕಾನ್ಫರೆನ್ಸ್ ನಾಯಕರಾದ ಉಮರ್ ಅಬ್ದುಲ್ಲ ಹೇಳಿದ್ದಾರೆ. ತಬ್‍ಲೀಗ್ ವೈರಸ್ ತುಂಬ ಅಪಾಯಕಾರಿ ಎಂದು ಹ್ಯಾಶ್‍ಟ್ಯಾಗ್ ಕುಪ್ರಚಾರ ನಡೆಯತ್ತಿದೆ ಎಂದು ಉಮರ್ ಅಬ್ದುಲ್ಲ ಟ್ವೀಟ್ ಮಾಡಿದ್ದಾರೆ. ಇಂತಹ ಅಪಪ್ರಚಾರ ನಡೆಸುವವರ ಶರೀರ ಆರೋಗ್ಯದಲ್ಲಿರಬಹುದು ಆದರೆ ಮನಸು ರೋಗಗ್ರಸ್ತವಾಗಿದೆ. ಮರ್ಕಝ್ ನಿಝಾಮುದ್ದೀನ್ ಅಧಿಕಾರಿಗಳು ಹೊರಡಿಸಿದ ಪ್ರಕಟಣೆಯಲ್ಲಿ ಸರಕಾರದ ಮಾರ್ಗದರ್ಶನದಂತೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಬೇಜವಾಬ್ದಾರಿ ಯಾವ ಕ್ರಮಗಳೂ ತಬ್ಲೀಗ್ ಜಮಾಅತ್ ನಿಂದ ನಡೆದಿಲ್ಲ. ಭಾರತದ ಬಹುಭಾಗ ಮುಸ್ಲಿಮರು ಕೇಂದ್ರ ಸರಕಾರದ ನಿರ್ದೇಶನಗಳನ್ನು ಸಲಹೆಗಳನ್ನು ಅನುಸರಿಸುತ್ತಿದ್ದಾರೆ ಎಂದು ಉಮರ್ ಅಬ್ದುಲ್ಲ ಟ್ವೀಟ್ ಮಾಡಿದ್ದಾರೆ. ಮಾತ್ರವಲ್ಲ, ಮರ್ಕಝ್ ನಿಝಾಮುದ್ದೀನ್ ಅಧಿಕಾರಿಗಳ ಸ್ಪಷ್ಟೀಕರಣದ ಹೇಳಿಕೆಯನ್ನೂ ಉಮರ್ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.