ಕೊರೋನಾ: ತಬ್ಲೀಗಿಗಳ ಪರೀಕ್ಷಾ ಫಲಿತಾಂಶ ನೆಗೆಟಿವ್- ಪಂಜಾಬ್ ಸರಕಾರ

0
1578

ಸನ್ಮಾರ್ಗ ವಾರ್ತೆ

ಮನ್ಸಾ, ಎ .23: ಪಂಜಾಬಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಗಿದ್ದ ಇಬ್ಬರು ತಬ್ಲೀಗಿಗಳ ಪರೀಕ್ಷಾ ಫಲಿತಾಂಶ ಬಂದಿದ್ದು ಇಬ್ಬರೂ ನೆಗೆಟಿವ್ ಆಗಿದ್ದಾರೆ ಎಂದು ರಾಜ್ಯ ವಿಶೇಷ ಮುಖ್ಯ ಕಾರ್ಯದರ್ಶಿ ಕೆ ಬಿ ಎಸ್ ಸಿಧು ತಿಳಿಸಿದ್ದಾರೆ. ಕೊರೊನಾ ತಗಲಿರಬಹುದು ಎಂಬ ಶಂಕೆಯಲ್ಲಿ ಎಪ್ರಿಲ್ ಮೂರರಂದು ಇವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ಇಬ್ಬರ ಫಲಿತಾಂಶ ಬಂದಿದೆ. ಇವರಿಗೆ ಕೊರೊನಾ ಇಲ್ಲ. ಒಬ್ಬರು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಹೋಗಿದ್ದಾರೆ.

ಇವರ ಸಂಪರ್ಕದಲ್ಲಿದ್ದ 25 ಮಂದಿಯ ಪರೀಕ್ಷಾ ಫಲಿತಾಂಶವೂ ನೆಗೆಟಿವ್ ಅಗಿದೆ ಎಂದು ಸಿಧು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪಂಜಾಬ್‍ನಲ್ಲಿ 245 ಮಂದಿಗೆ ವೈರಸ್ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 39 ಮಂದಿ ಗುಣಮುಖರಾಗಿದ್ದಾರೆ. 16 ಮಂದಿ ಮೃತಪಟ್ಟಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.