ತುರ್ತು ಚಿಕಿತ್ಸೆಗೆ ತಲಪಾಡಿ ಗೇಟ್ ತೆರೆಯಲು ಕರ್ನಾಟಕ ಒಪ್ಪಿಗೆ: ಸುಪ್ರೀಂಕೋರ್ಟಿಗೆ ತಿಳಿಸಿದ ಕೇಂದ್ರ

0
681
MANGALURU :The National Highways Authority of India (NHAI) has fully equipped toll plazas along the four-laned National Highway 66 between Talapady and KundapuraOne of the toll plazas at Talapady near Mangaluru.

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 7: ಕೇರಳ ಗಡಿಯನ್ನು ಕರ್ನಾಟಕ ಸರಕಾರ ಮಣ್ಣು ಹಾಕಿ ಮುಚ್ಚಿರುವುದಕ್ಕೆ ಸಂಬಂಧಿಸಿದ ವಿವಾದವನ್ನು ಪರಿಹರಿಸಲಾಗಿದೆ ಎಂದು ಸುಪ್ರೀಂಕೋರ್ಟಿಗೆ ಕೇಂದ್ರ ಸರಕಾರ ತಿಳಿಸಿದೆ. ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ತಲಪಾಡಿ ಮೂಲಕ ಕರ್ನಾಟಕ್ಕೆ ಕಳುಹಿಸಿಕೊಡಲು ತೀರ್ಮಾನಿಲಾಗಿದೆ. ಅದಕ್ಕೆ ಅಗತ್ಯವಿರುವ ಪ್ರೊಟೊ ಕಾಲ್ ನಿಶ್ಚಯಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಕೇರಳ, ಕರ್ನಾಟಕ ಮುಖ್ಯ ಕಾರ್ಯದರ್ಶಿಗಳ ನಡುವಿನ ಜಂಟಿ ಸಭೆಯಲ್ಲಿ ಗಡಿ ವಿವಾದ ಬಗೆಹರಿಯಿತು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಸುಪ್ರೀಂಕೋರ್ಟಿಗೆ ತಿಳಿಸಿದರು.

ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಯವರನ್ನು ಕರೆಯಿಸಿಕೊಂಡು ಸಮಸ್ಯೆ ಬಗೆಹರಿಸಿ ಬಿಡಿ ಎಂದು ಸುಪ್ರೀಂಕೋರ್ಟು ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.