ಸನ್ಮಾರ್ಗ ವಾರ್ತೆ
ಚೆನ್ನೈ,ಆ.30: ತಮಿಳ್ನಾಡಿನ ಸಾಮಾಜಿಕ-ಮಾನವಹಕ್ಕು ಕಾರ್ಯಕರ್ತ ಪಿಯೂಶ್ ಮಾನುಷ್ ರವರನ್ನು ಚರ್ಚೆಗೆಂದು ಬಿಜೆಪಿ ಕಚೇರಿಗೆ ಆಹ್ವಾನಿಸಿ ಹಲ್ಲೆ ನಡೆಸಲಾಗಿದೆ. ಕೇಂದ್ರ ಸರಕಾರದ ನಿಲುವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದ ಅವರೊಂದಿಗೆ ಚರ್ಚಿಸಲು ಸಿದ್ಧ ಎಂದು ಹೇಳಿದ ಬಳಿಕ ಹಲ್ಲೆ ನಡೆಸಲಾಗಿದೆ.
ಆರ್‌ಬಿಐ, ಕಾಶ್ಮೀರ, ದೇಶದ ಆರ್ಥಿಕ ಪರಿಸ್ಥಿತಿ ಇತ್ಯಾದಿ ವಿಷಯಗಳಲ್ಲಿ ಮಾನುಷ್‍ರವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದರು. ಜನರಿಗೆ ಸತ್ಯ ತಿಳಿಸಬೇಕಾಗಿದೆ. ಇದಕ್ಕಾಗಿ ತಾನು ಬಿಜೆಪಿ ನಾಯಕರೊಂದಿಗೆ ಸಂವಾದೂ ಸಿದ್ಧ ಎಂದು ಮಾನುಷ್ ಹೇಳಿದ್ದರು. ತದನಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಅವರನ್ನು ಪಾರ್ಟಿ ಕಚೇರಿಗೆ ಕರೆಯಿಸಿಕೊಂಡಿದ್ದರು. ಬುಧವಾರ ಸಂಜೆ ಐದು ಗಂಟೆಗೆ ಸಮಯ ನಿಗದಿಗೊಳಿಸಲಾಗಿತ್ತು. ಫೇಸ್‍ಬುಕ್ ಪುಟ ಲೈವ್ ಮಾಡಿ ಪಿಯೂಷ್ ಬಿಜೆಪಿ ಕಚೇರಿಗೆ ಬಂದಿದ್ದರು.
ಸಂವಾದ ನಡೆಯುವ ಮೊದಲು ತನಗೆ ಬಿಜೆಪಿ ಕಾರ್ಯಕರ್ತರಿಂದ ಕೊಲೆ ಬೆದರಿಕೆ ಇದೆ ಎಂದು ಮಾನುಷ್ ತಿಳಿಸಿದರು. ಚರ್ಚೆ ನಡೆಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅವರನ್ನು ಸುತ್ತುವರಿದು ಹಲ್ಲೆ ನಡೆಸಿ ಚಪ್ಪಲಿಹಾರ ಹಾಕಿದ್ದಾರೆ. ಪಿಯೂಷ್‍ರನ್ನು ಸೇಲಂ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಕಡೆಯವರು ಅಸ್ತಮಪಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.
https://m.facebook.com/story.php?story_fbid=10157987678494617&id=827374616












