ಇದು ನನ್ನ ರಾಜ್ಯ, ನನ್ನ ಹಕ್ಕು- ತಮಿಳ್ನಾಡು ಕಾಂಗ್ರೆಸ್ ವಿರುದ್ಧ ಕೆಂಡವಾದ: ಮುಖ್ಯಮಂತ್ರಿ ಡಿಕೆಶಿ

0
8

ಸನ್ಮಾರ್ಗ ವಾರ್ತೆ

ಬೆಂಗಳೂರು: ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರವಾಗಿ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಕಮ್ ಟ್ಯಾಗೋರ್ ಅವರ ಟೀಕೆಗಳಿಗೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. “ಇದು ನನ್ನ ರಾಜ್ಯ, ನನ್ನ ಹಕ್ಕು; ಯಾರೂ ಟೀಕಿಸಿದರೂ ನನಗೆ ತೊಂದರೆಯಿಲ್ಲ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದಲ್ಲಿ ಮೇಕೆದಾಟು ಜಲಾಶಯ ನಿರ್ಮಿಸುವ ಹಕ್ಕು ರಾಜ್ಯಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಸಮರ್ಥಿಸಿಕೊಂಡಿದ್ದರು. ಇದಕ್ಕೆ ತಮಿಳ್ನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಕ್ಯಂ ಟ್ಯಾಗೋರ್ ಕಟು ಟೀಕೆ ಮಾಡಿದ್ದರು. ತಮಿಳುನಾಡಿನಲ್ಲಿ ಡಿ.ಎಂ.ಕೆ, ಎಐಎಡಿಎಂಕೆ ಅಥವಾ ಕಾಂಗ್ರೆಸ್ ಪಕ್ಷಗಳಲ್ಲಿ ಯಾರು ವಿರೋಧಿಸಿದರೂ ತಮ್ಮ ನಿಲುವಿನಲ್ಲಿ ಬದಲಾವಣೆ ಇರುವುದಿಲ್ಲ ಎಂದಿದ್ದಾರೆ.

ಕಾವೇರಿ ನದಿ ನೀರಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ತಮಿಳುನಾಡಿಗೆ ಸಿಗಬೇಕಾದ ಪಾಲನ್ನು ಖಚಿತಪಡಿಸುವುದರ ಜೊತೆಗೆ, ಈ ಯೋಜನೆಯು ತಮಿಳುನಾಡಿಗೂ ಕೂಡ ಪ್ರಯೋಜನಕಾರಿಯಾಗಿದೆ ಎಂದು ಡಿಕೆಶಿ ಹೇಳಿದರು. ತಮಿಳುನಾಡು ರಾಜಕೀಯ ನಾಯಕರು ನಿಯೋಗದೊಂದಿಗೆ ಬಂದು ಯೋಜನಾ ಸ್ಥಳವನ್ನು ವೀಕ್ಷಿಸಿದರೆ, ಇದರಿಂದ ಅವರಿಗೆ ಹೇಗೆ ಅನುಕೂಲವಾಗಲಿದೆ ಎಂಬುದನ್ನು ವಿವರಿಸಲು ಸಿದ್ಧವಿರುವುದಾಗಿ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ. ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರದ ಮತ್ತು ಅಲ್ಲಿನ ರಾಜಕೀಯ ಪಕ್ಷಗಳ ತೀವ್ರ ವಿರೋಧ ಮುಂದುವರಿದಿದ್ದು, ಇದು ಎರಡೂ ರಾಜ್ಯಗಳ ಕಾಂಗ್ರೆಸ್ ಘಟಕಗಳ ನಡುವೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.