ತಾನು ಕೂಡ ಗೃಹಬಂಧನದಲ್ಲಿದ್ದೇನೆ- ಮೆಹಬೂಬ ಮುಫ್ತಿಯ ಪುತ್ರಿ ಹೇಳಿಕೆ

0
772

ಸನ್ಮಾರ್ಗ ವಾರ್ತೆ-
ಶ್ರೀನಗರ, ಜ. 3: ತನ್ನನ್ನು ಕೂಡ ಅಧಿಕಾರಿಗಳು ಗೃಹಬಂಧನದಲ್ಲಿರಿಸಿದ್ದಾರೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯ ಪುತ್ರಿ ಇಲ್ತಿಜ ಮುಫ್ತಿ ಹೇಳಿದ್ದಾರೆ. ಅವರ ಅಜ್ಜ ಮುಫ್ತಿ ಮುಹಮ್ಮದ್ ಸಈದ್ ಎರಡು ಸಲ ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು. ಅವರ ಗೋರಿ ಸ್ಥಳ ಸಂದರ್ಶಿಸಲು ಪೊಲೀಸರ ಅವಕಾಶ ನೀಡಿಲ್ಲ ಎಂದು ಇಲ್ತಿಜ ಆರೋಪಿಸಿದ್ದಾರೆ. ಅಜ್ಜನ ನಾಲ್ಕನೆ ಮರಣವಾರ್ಷಿಕ ದಿನ ಜನುವರಿ ಏಳಕ್ಕೆ ಗೋರಿಯನ್ನು ಸಂದರ್ಶಿಸಲು ಅವಕಾಶ ಕೋರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಆದರೆ ಇದಕ್ಕೆ ಅನುಮತಿ ಸಿಕ್ಕಿಲ್ಲ ಎಂದು ಇಲ್ತಿಜಾ ಸುದ್ದಿ ಸಂಸ್ಥೆಗೆ ತಿಳಿಸಿದರು.

ತಾನೂ ಗೃಹಬಂಧನದಲ್ಲಿದ್ದೇನೆ. ಎಲ್ಲಿಗೂ ಹೋಗಲು ಬಿಡುವುದಿಲ್ಲ. ಅಜ್ಜನ ಗೋರಿ ಸಂದರ್ಶಿಸಲು ಬಿಟ್ಟಿಲ್ಲ. ಅದು ಅಪರಾಧವೇ? ಕಲ್ಲು ಎಸೆಯಲು ,ಪ್ರತಿಭಟಿಸಲು ಹೋಗುತ್ತಿರುವೆ ಎಂದು ಅಧಿಕಾರಿಗಳು ಭಾವಿಸಿಕೊಂಡಿರಬಹುದು ಎಂದು ಇಲ್ತಿಜಾ ಹೇಳಿದರು. ಶ್ರೀನಗರದಿಂದ 60 ಕಿಲೊ ಮೀಟರ್ ದೂರದ ಅನಂತ್ ನಾಗ್‍ನಲ್ಲಿ ಮುಫ್ತಿ ಮುಹಮ್ಮದ್ ಸಈದ್‍ರ ಗೋರಿ ಇದೆ. ಇದೇವೇಳೆ ಪೊಲೀಸರು ಇಲ್ತಿಜಾ ಗೃಹಬಂಧನದಲ್ಲಿದ್ದಾರೆ ಎಂಬುದನ್ನು ನಿರಾಕರಿಸಿದ್ದಾರೆ.