ನೀಟ್ ಪರೀಕ್ಷೆ: ಫೋಟೊ ಇಲ್ಲದ ವಿದ್ಯಾರ್ಥಿಗೆ ಸಹಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ತಾರೆಯಾದ ಪೊಲೀಸ್

0
743

ಚೆನ್ನೈ,ಮೇ 6: ಫೋಟೊ ಇಲ್ಲದ್ದರಿಂದ ನೀಟ್ ಪರೀಕ್ಷಾ ಕೇಂದ್ರದಿಂದ ಹೊರಗಾಗ ವಿದ್ಯಾರ್ಥಿಗೆ ಸಹಕರಿಸಿದ ಪೊಲೀಸ್ ಈಗ ಸಾಮಾಜಿಕ ಮಾಧ್ಯಮದಲ್ಲಿ ತಾರೆ ಯಾಗಿದ್ದಾರೆ. ಕೋಯಮತ್ತೂರಿನ ನ್ಯಾಶನಲ್ ಮಾದರಿ ಸ್ಕೂಲ್‍ನಲ್ಲಿ ಫೋಟೊ ಇಲ್ಲ ಎಂದು ಕಾರಣವೊಡ್ಡಿ ವಿದ್ಯಾರ್ಥಿಗೆ ಪರೀಕ್ಷಾ ಹಾಲ್ ಪ್ರವೇಶ ನಿರಾಕರಿಸಲಾಗಿತ್ತು.

ದಿಕ್ಕೆಟ್ಟಿದ್ದ ವಿದ್ಯಾರ್ಥಿಯನ್ನು ಮಾತಾಡಿಸಿ ಕಾರಣ ಕೇಳಿದ ಭದ್ರತಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಪೊಲೀಸ್ ಕಾನ್ಸ್‍ಟೇಬಲ್ ಪಿ.ಶರವಣ್‍ಕುಮಾರ್ ತನ್ನ ಜೇಬಿನಿಂದ 40 ರೂಪಾಯಿ ಕೊಟ್ಟು ಫೋಟೊ ತೆಗೆಯಲು ಸಹಕರಿಸಿದರು. ಕೂಡಲೇ ಫೋಟೊದೊಂದಿಗೆ ವಿದ್ಯಾರ್ಥಿಯನ್ನು ಪರೀಕ್ಷಾ ಹಾಲ್‍ಗೆ ಕರೆದುಕೊಂಡು ಬಂದು ಬಿಟ್ಟರು.ಇದನ್ನು ನೋಡಿದ ಅಲ್ಲಿದ್ದ ಹೆತ್ತವರು ಮತ್ತು ಸಾರ್ವಜನಿಕರು ಶರವಣಕುಮಾರ್‍‌ನ್ನು ಅಭಿನಂದಿಸಿದ್ದು ಕೆಲವರು ಶರವಣ್‍ರ ಫೋಟೊ ತೆಗೆದು ಸಾಮಾಜಿಕ ಮಾಧ್ಯಮಕ್ಕೂ ಹಾಕಿದ್ದಾರೆ. ಶರವಣರ ಸಹೃದಯಿ ಮನಸ್ಸಿಗೆ ಹಲವಾರು ಮಂದಿ ಕೃತಜ್ಞತೆ ಸೂಚಿಸಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಕಳುಹಿಸಿದ್ದಾರೆ. ಕೆಲವೇ ಸಮಯದಲ್ಲಿ ಸಾವಿರಾರು ಮಂದಿ ಪೋಸ್ಟನ್ನು ಶೇರ್ ಮಾಡಿದ್ದಾರೆ.