ಸನ್ಮಾರ್ಗ ವಾರ್ತೆ
ಅಮೆರಿಕಾದಲ್ಲಿ ಭಾರತದ ಉತ್ಪನ್ನಗಳ ಬೆಲೆ ಕೇಳಿದ್ರೆ ನೀವು ದಂಗಾಗಬಹುದು. ಅಮೆರಿಕಾದಲ್ಲಿರುವ ರಜತ್ ಎಂಬ ವ್ಯಕ್ತಿ ಭಾರತದ ಉತ್ಪನ್ನಗಳಿಗೆ ಅಮೆರಿಕ ಹಾಕುತ್ತಿರುವ ತೆರಿಗೆ ಮತ್ತು ಅದರಿಂದಾಗಿ ಏರಿರುವ ಬೆಲೆಗಳ ಬಗ್ಗೆ ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಮೆರಿಕಾದ ಡಲ್ಲಾಸ್ನ ವಾಲ್ಮಾರ್ಟ್ ಶಾಪ್ಗೆ ಹೋದ ರಜತ್ ಅಲ್ಲಿರುವ ಭಾರತೀಯ ಉತ್ಪನ್ನಗಳನ್ನು ತೋರಿಸಿ ಅವುಗಳ ಬೆಲೆಯನ್ನು ಹೇಳುತ್ತಾ ಹೋಗಿದ್ದಾರೆ.
20 ರೂಪಾಯಿಯ ಹೈಡ್ ಅಂಡ್ ಸೀಕ್ ಬಿಸ್ಕೆಟ್ ಗೆ ಈಗ 400 ರೂಪಾಯಿ. ಅರ್ಧ ಕೆಜಿ ಬೇಳೆಗೆ 320 ರೂಪಾಯಿ. 1/2 ಕೆಜಿ ಬಟಾಟೆ ಬುಜ್ಜಿಗೂ 320 ರೂಪಾಯಿ. ಪಾರ್ಲೆಜಿ, ಗುಡ್ಡೆ, ಬಿರಿಯಾನಿ ಮಸಾಲ, ತಂದೂರಿ ಮಸಾಲ, ಬಟರ್ ಚಿಕನ್, ಸಾಸ್ ಮುಂತಾದ ಎಲ್ಲವೂ ಇಲ್ಲಿ ಸಿಗುತ್ತದೆ ಆದರೆ ಎಲ್ಲವುಗಳ ಬೆಲೆಯೂ ಗಗನದಲ್ಲಿದೆ ಎಂದು ರಜತ್ ಹೇಳಿದ್ದಾರೆ.
ಇವರ ವಿಡಿಯೋಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹೈಡ್ ಎಂಡ್ ಸೀಕ್ ಬಿಸ್ಕುಟ್ ಗೆ 400 ರೂಪಾಯಿ ಎಂಬುದನ್ನು ಕೇಳಿ ಜನರು ದಂಗಾಗಿದ್ದಾರೆ. ಕೆನಡದಲ್ಲಿ ಇಷ್ಟು ರೇಟ್ ಇಲ್ಲ ಎಂದು ಕೆಲವರು ಹೇಳಿದ್ದಾರೆ. ಭಾರಿ ಸಂಖ್ಯೆಯಲ್ಲಿ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಮತ್ತು ಪ್ರತಿಕ್ರಿಯಿಸಿದ್ದಾರೆ.
ತೆರಿಗೆ ಯುದ್ಧದಿಂದ ಭಾರತೀಯ ಉತ್ಪನ್ನಗಳಿಗೆ ಆಗ್ತಾ ಇರುವ ಅನ್ಯಾಯದ ಬಗ್ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಇಷ್ಟೊಂದು ಬೆಲೆಕೊಟ್ಟು ಭಾರತೀಯ ಉತ್ಪನ್ನಗಳನ್ನು ಯಾರು ಖರೀದಿಸುತ್ತಾರೆ ಎಂಬ ಪ್ರಶ್ನೆಯನ್ನು ಎತ್ತಿದವರಿದ್ದಾರೆ.












