ಟೀಮ್ ಬಿ ಹ್ಯೂಮನ್ ಸಂಸ್ಥೆಯಿಂದ ‌‌ಫುಟ್ಬಾಲ್ ಪಂದ್ಯಾಟ: ಬಿ ಹ್ಯೂಮನ್ ಚೊಚ್ಚಲು‌ ಚಾಂಪಿಯನ್ ಕಪ್ ಮುಡಿಗೇರಿಸಿಕೊಂಡ ಎಂ.ಎಫ್.ಸಿ ಉಳ್ಳಾಲ್

0
41

ಸನ್ಮಾರ್ಗ ವಾರ್ತೆ

ಅಡ್ಯಾರ್: ಟೀಮ್ ಬಿ ಹ್ಯೂಮನ್ ಚಾಂಪಿಯನ್ ಕಪ್-2022 ಸೀಸನ್-1 ಪುಟ್ಬಾಲ್ ಪಂದ್ಯಾಟವು ಅಡ್ಯಾರ್‌ನ ಬರಕ ಇಂಟರ್ ನ್ಯಾಶನಲ್ ಕಾಲೇಜಿನ ಮೈದಾನಿನಲ್ಲಿ ನಡೆಯಿತು. ಹೊನಲು ಬೆಳಕಿನ ಈ ಕ್ರೀಡಾ ಕೂಟದಲ್ಲಿ ಹದಿನಾರು ತಂಡಗಳು ಭಾಗವಹಿಸಿದ್ದವು. ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ವಿಭಿನ್ನವಾಗಿ ಕಾರ್ಯಾಚರಿಸುತ್ತಿರುವ ಟೀಮ್ ಬಿ ಹ್ಯೂಮನ್ ಸಂಸ್ಥೆ, ಯುವ ಸಮೂಹವನ್ನು ಉತ್ತೇಜಿಸಲು ಮತ್ತು ಸಂಘಟಿಸಲು ಈ ಪಂದ್ಯಾಟವನ್ನು ನಡೆಸಿದೆ‌.

ಕ್ರೀಡಾ ಪ್ರೇಮಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಯುವಕರಲ್ಲಿ ಟೀಂ ಬಿ ಹ್ಯೂಮನ್ ನ ಸೇವಾ ಕಾರ್ಯಗಳ ಕುರಿತು ಜಾಗೃತಿ ಮೂಡಿಸಿ ಅವರಲ್ಲೂ ಸಾಮಾಜಿಕ ಕಾಳಜಿಯನ್ನು ಹೆಚ್ಚಿಸಲು, ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಸಾರಲು ಈ ಪುಟ್ಬಾಲ್ ಪಂದ್ಯಾಟಕ್ಕೆ ಸಾಧ್ಯವಾಯಿತು ಎಂಬ ಆಶಯ ವ್ಯಕ್ತವಾಗಿದೆ. ಹದಿನಾರು ತಂಡಗಳ ಈ ಪಂದ್ಯಾಟದಲ್ಲಿ ಎಂ.ಎಫ್.ಸಿ ಉಳ್ಳಾಲ್ ತಂಡವು ಪ್ರಥಮ ಬಹುಮಾನ ಪಡೆದಿದ್ದು, ಸುಲ್ತಾನ್ ಎಫ್.ಸಿ ದ್ವಿತೀಯ ಬಹುಮಾನ ಪಡೆದಿದೆ.

ಸುರಿಯುತ್ತಿದ್ದ ಮಳೆಯ ನಡುವೆಯೂ ಬಹಳ ರೊಮಾಂಚನಕಾರಿಯಾಗಿ ನಡೆದ ಈ ಪುಟ್ಬಾಲ್ ಪಂದ್ಯಾಟವನ್ನು ಟೀಂ ಬಿ ಹ್ಯೂಮನ್ ನ ಯುವ ಉತ್ಸಾಹಿ ಕಾರ್ಯಕರ್ತರ ತಂಡವು ಬಹಳ ಯಶಸ್ವಿಯಾಗಿ ನಿರ್ವಹಿಸಿತು.

ಆರಂಭದಲ್ಲಿ, ಉಳ್ಳಾಲ ಶಾಸಕರು, ಮಾಜಿ ಸಚಿವರಾದ ಯು.ಟಿ ಖಾದರ್ ಅವರು ಕ್ರೀಡಾ ಕೂಟದಲ್ಲಿ ಭಾಗವಹಿಸಿದ ತಂಡಗಳಿಗೆ ಮೈದಾನಿನಲ್ಲಿ ಶುಭ ಹಾರೈಸಿದರು, ಪಂದ್ಯಾಟದಲ್ಲಿ ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಶಾಸಕರಾದ ಅಶ್ರಫ್ ಎಕೆ.ಎಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮಾಜಿ ಶಾಸಕರಾದ ಮೊಯಿದ್ದೀನ್ ಬಾವಾ, ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಬೋರ್ಡ್ ನ ಅಬ್ದುಲ್ ನಾಸೀರ್, ಡಿ.ಕೆ.ಎಫ್.ಎ ನ ಅಧ್ಯಕ್ಷರಾದ ಅಸ್ಲಂ, ಕಾರ್ಪೊರೇಟರ್ ಲತೀಫ್ ಕಂದಕ್, ವಕೀಲರಾದ ಸುಕೂರ್, ಕೆ.ಎಸ್.ಎ ಕೆ.ಎಂ.ಟಿ ಗ್ರೂಪ್ ನ ರಝಾಕ್, ಸುಹೈಲ್ ಕಂದಕ್, ಬರಕಾ ಟ್ರಸ್ಟ್ ನ ಉಂಚಿ ಹಾಜಿ, ಬರಕಾ ಕಾಲೇಜಿನ ವ್ಯವಸ್ಥಾಪಕರಾದ ಶಮೀರ್, ಆಯಾನ್ ಬರಕ, ಫರಾಝ್ ಮುಂಬೈ, ವಾಮಂಜೂರ್ ಬ್ಲಾಕ್ ಕಾಂಗ್ರೆಸ್ಸ್ ನ ಅಧ್ಯಕ್ಷರಾದ ಸುರೇಂದ್ರ, ವಕೀಲರಾದ ಜಿಷಾನ್, ಉಳ್ಳಾಲ ವಲಯ ಎನ್.ಎಸ್.ಯು.ಐ ನ ಯೂತ್ ಅಧ್ಯಕ್ಷ ಅಹ್ನಾಫ್ ಡೀಲ್ ಹಾಗೂ ಟೀಂ ಬಿ ಹ್ಯೂಮನ್ ನ ಸ್ಥಾಪಕರಾದ ಆಸಿಫ್ ಡೀಲ್ ಮುಂತಾದ ಗಣ್ಯರು ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದರು.