ಮಂಗಳೂರು| ಅಪಾಯದಲ್ಲಿದ್ದ ಹಡಗಿನಿಂದ 15 ಸಿರಿಯನ್ ಪ್ರಜೆಗಳನ್ನು ರಕ್ಷಿಸಿದ ಕೋಸ್ಟ್‌ಗಾರ್ಡ್‌

0
27

ಸನ್ಮಾರ್ಗ ವಾರ್ತೆ

ಮಂಗಳೂರು: ಮಂಗಳೂರಿನ ಪಣಂಬೂರು ಸಮೀಪದ ಎನ್‌ಎಂಪಿಟಿ ಬಳಿ ಮುಳುಗಡೆಯ ಭೀತಿಯನ್ನು ಎದುರಿಸಿ ಹಡಗೊಂದರಲ್ಲಿ ಸಿಲುಕಿಕೊಂಡಿದ್ದ ಸುಮಾರು 15 ಮಂದಿ ಸಿರಿಯಾ ದೇಶ ಪ್ರಜೆಗಳನ್ನು ಕರಾವಳಿಯ ಕೋಸ್ಟ್‌ಗಾರ್ಡ್‌ ಸಿಬ್ಬಂದಿಗಳು ರಕ್ಷಿಸಿರುವ ಬಗ್ಗೆ ವರದಿಯಾಗಿದೆ.

“ಮಲೇಷ್ಯಾದಿಂದ ಲೆಬನಾನ್‌ಗೆ ಪ್ರಯಾಣಿಸುತ್ತಿದ್ದ ಹಡಗೊಂದು ಮಂಗಳೂರು ಎನ್‌ಎಂಪಿಟಿ ಬಳಿ ಬರುತ್ತಿದ್ದಂತೆಯೇ ಮುಳುಗಡೆಯ ಭೀತಿಗೊಳಗಾಗಿತ್ತು. ಇದರಲ್ಲಿ ಸಿಲುಕಿಕೊಂಡಿದ್ದ ಅದರ 15 ಮಂದಿ ಸಿಬ್ಬಂದಿಯನ್ನು ಮಂಗಳೂರಿನ ಕೋಸ್ಟ್‌ಗಾರ್ಡ್ ಅಧಿಕಾರಿಗಳು ರಕ್ಷಿಸಿದ್ದಾರೆ. ಹಡಗಿನಲ್ಲಿದ್ದವರೆಲ್ಲರೂ ಸಿರಿಯನ್ ಪ್ರಜೆಗಳು. ಇವರನ್ನು ಬುಧವಾರ ಬೆಳಗ್ಗೆ ಪಣಂಬೂರು ಪೊಲೀಸರಿಗೆ ಹಸ್ತಾಂತರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಿರುವುದಾಗಿ” ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಪ್ರಿನ್ಸೆಸ್ ಮಿರಾಲ್ ಎಂಬುದು ಹಡಗಿನ ಹೆಸರಾಗಿದ್ದು, ಹಡಗಿನಲ್ಲಿದ್ದ ಮಾಸ್ಟರ್ ಸಫ್ವಾನ್ ಕೈದೂನ್ ಅಬ್ದುಲ್ ಖಾದರ್, ಅಝಮ್ ಅಲ್ಮಾ ಸೊಹೇಲ್, ತುಮೇಹ್ ಮೊಹಮ್ಮದ್, ಅಲಿ ಬದ್ರ್ ಮೊಹಮ್ಮದ್, ಲಿವಾ ಮೈನಿ ಅಹ್ಮದ್, ಅಬ್ದುಲ್ಲ ಸಮೋತ್ ಉಸ್ಮಾನ್, ಅಲಿ ಝ್ವೆಝ್ಕೆ ಖಾಲೆದ್, ನಿಝಾರ್ ಅಬ್ದುಲ್ಲಾ, ಹಾರೂನ್ ಗಾಲಿಬ್, ಅಬ್ಬಾಸ್ ರಮಿ, ಅಬ್ದುಲ್ ಕರೀಮ್ ನಾಸಿರ್, ಮೊಹಮ್ಮದ್ ಜೌದ್ ಆದಿಲ್, ಅಬ್ರಾಹೀಂ ಮೊಹಮ್ಮದ್, ಅಬ್ದುಲ್ಲಾ ನಾದಿರ್, ಮುಸ್ತಫಾ ಝಕರಿಯಾ ಎಂಬ 15 ಮಂದಿ ಸಿರಿಯನ್ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ತಿಳಿದುಬಂದಿದೆ.