ಮೋದಿಯ ಕೀಳ್ಮಟ್ಟದ ಭಾಷೆಯನ್ನೂ ಟ್ವೀಟ್ ಮಾಡಿ: ಸುಷ್ಮಾ ಸ್ವರಾಜ್‍ಗೆ ಸವಾಲು ಹಾಕಿದ ತೇಜಸ್ವಿ ಯಾದವ್

0
743

ಪಾಟ್ನ,ಮೇ 8: ನರೇಂದ್ರ ಮೋದಿಯನ್ನು ಟೀಕಿಸಿದ ಮಮತಾರ ವಿರುದ್ಧ ಗದಾಪ್ರಹಾರಕ್ಕೆ ಹೊರಟ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ತೇಜಸ್ವಿ ಯಾದವ್ ಸವಾಲು ಹಾಕಿದ್ದಾರೆ. ಪ್ರಧಾನಿ ಉಪಯೋಗಿಸುವ ಕೆಟ್ಟ ಭಾಷೆಯ ಕುರಿತು ಕೂಡ ವಿದೇಶ ಸಚಿವೆ ಟ್ವೀಟ್ ಮಾಡಬೇಕೆಂದು ತೇಜಸ್ವಿ ಹೇಳಿದ್ದಾರೆ. ಪ್ರಧಾನಿಯ ಕೀಳ್ಮಟ್ಟದ ಮಾತುಗಳೇಕೆ ನಿಮ್ಮ ಗಮನಕ್ಕೆ ಬಂದಿಲ್ಲ. ಅದನ್ನು ನೀವು ಕೂಡ ಗಮನಿಸಿದ್ದೀರಿ ಎಂದು ಭಾವಿಸಿದ್ದೇನೆ. ನೀವು ಜ್ಞಾನ ಮತ್ತು ಅನುಭವದಲ್ಲಿ ಅವರಿಗಿಂತ ಹಿರಿಯರು. ಆದರೂ ಸತ್ಯವನ್ನು ತಿಳಿದು ನೋಡದೇ ಮಮತಾ ಬ್ಯಾನರ್ಜಿಯ ವಿರುದ್ಧ ಗುರಿ ಯಾಕೆ ಇಡುತ್ತಿದ್ದೀರಿ ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಪ್ರಧಾನಿಯನ್ನು ಟೀಕಿಸಿದ ಮಮತಾರನ್ನು ಎಲ್ಲೆ ಮೀರಿದ್ದಾರೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ತೇಜಸ್ವಿ ಇಂತಹ ಖಾರ ಪ್ರತಿಕ್ರಿಯೆ ನೀಡಿದರು.