ಜಮ್ಮುವಿನಲ್ಲಿ ಭಯೋತ್ಪಾದಕನ ಬಂಧನ; ಪೂಂಚ್‍ನಲ್ಲಿ ಪುನಃ ಪಾಕಿಸ್ತಾನದಿಂದ ಗುಂಡು

0
455

ಶ್ರೀನಗರ,ಆ.27: ಜಮ್ಮು-ಕಾಶ್ಮೀರದ ದಲಿನ ಚೌಕ್ ಪ್ರದೇಶದಲ್ಲಿ ಭಯೋತ್ಪಾದಕನನ್ನು ಬಂಧಿಸಲಾಗಿದೆ. ಚೆಕ್‍ಪೋಸ್ಟ್‌ನ ಟ್ರಂಕ್‍ನಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸುತ್ತಿದ್ದಾಗ ಈತನನ್ನು ಸೇನೆ ಬಂಧಿಸಿದೆ. ಭಯೋತ್ಪಾದಕನಿಂದ ಎಕೆ 47 ರೈಫಲ್, ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ನಂತರ ಈ ಪ್ರದೇಶದಲ್ಲಿ ಸೇನೆ ಭಯೋತ್ಪಾದಕರಿಗಾಗಿ ಹುಡುಕಾಟ ಆರಂಭಿಸಿದ್ದು, ಇದೇ ವೇಳೆ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನದ ಸೇನೆ ಪೂಂಚ್‍ನಲ್ಲಿ ಸೈನಿಕ ಪೋಸ್ಟ್‌ಗಳಿಗೆ ಗುಂಡು ಹಾರಿಸಿತು. ಭಾರತ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ವರದಿಯಾಗಿದೆ. ಕಳೆದ ದಿವಸ ರಜೌರಿ, ಖಾನ್‍ಮೋಹ್ ಪ್ರದೇಶದಲ್ಲಿ ಭಯೋತ್ಪಾದಕರು ಇಬ್ಬರನ್ನು ಅಪಹರಿಸಿದ್ದರು. ಓರ್ವನನ್ನು ಕಾಡಿನ ಪ್ರದೇಶದಲ್ಲಿ ರಾತ್ರೆಯ ವೇಳೆ ಕೊಂದು ಹಾಕಿದ್ದರು.