ಆನ್‍ಲೈನ್ ಮಾಧ್ಯಮಗಳು ಹಾಗೂ ಒಟಿಟಿ ಫ್ಲಾಟ್‍ಫಾರ್ಮ್‌ಗಳ ಮೇಲೆ ಕೇಂದ್ರ ಸರಕಾರದಿಂದ ನಿಯಂತ್ರಣ

0
381

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.11: ಭಾರತದ ಒಟಿಟಿ ಫ್ಲಾಟ್‌ಫಾರ್ಮ್‌ಗಳಿಗೂ ನ್ಯೂಸ್ ಪೋರ್ಟಲ್‍ಗಳಿಗೂ ನಿಯಂತ್ರಣ ಹೇರಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಇವುಗಳನ್ನು ಕೇಂದ್ರ ವಾರ್ತಾ ವಿನಿಮಯ ಸಚಿವಾಲಯದ ನಿಯಂತ್ರಣದಲ್ಲಿ ತರಲು ಕೇಂದ್ರ ಸರಕಾರ ಪ್ರಕಟಣೆ ಹೊರಡಿಸಿದೆ. ಪ್ರಕಟಣೆಗೆ ಅಧ್ಯಕ್ಷ ರಾಮನಾಥ್ ಕೋವಿಂದ್ ಸೋಮವಾರ ಸಹಿ ಹಾಕಿದ್ದಾರೆ. ಇದರೊಂದಿಗೆ ಕೇಂದ್ರ ಸರಕಾರದ ನಿಯಮಗಳು ಡಿಜಿಟಲ್ ಮಾಧ್ಯಮಗಳಿಗೂ ಅನ್ವಯವಾಗಲಿದೆ.

ಆನ್‍ಲೈನ್ ನ್ಯೂಸ್ ಪೋರ್ಟಲ್‍ಗಳಿಗೆ, ನೆಟ್‍ಫ್ಲಿಕ್ಸ್, ಅಮೆಝಾನ್ ಪ್ರೈಂ ಮೊದಲಾದ ಒಟಿಟಿ ಫ್ಲಾಟ್‍ಫಾರ್ಮ್‌ಗಳಿಗೆ, ಶಾಪಿಂಗ್ ಸೈಟ್‍ಗಳಿಗೂ ನಿಯಂತ್ರಣ ಹೇರಲು ಸರಕಾರ ತೀರ್ಮಾನಿಸಿದೆ. ಇದರೊಂದಿಗೆ ಆನ್‍ಲೈನ್‍ ಸಿನೆಮಾಗಳಿಗೆ, ಕಾರ್ಯಕ್ರಮಗಳನ್ನು ಸರಕಾರ ನಿಯಂತ್ರಿಸಲಿದೆ ಎಂದು ವರದಿಯಾಗಿದೆ. ಆನ್‍ಲೈನ್ ಮಾಧ್ಯಮಗಳಿಗೆ ನಿಯಂತ್ರಣ ಹೇರುವ ಕಾನೂನಿನ ಪ್ರಕ್ರಿಯೆ ಈ ಹಿಂದೆಯೇ ಆರಂಭವಾಗಿತ್ತು. ಒಟಿಟಿ ಪ್ಲಾಟ್‍ಫಾರ್ಮ್‌ಗಳನ್ನು ನಿಯಂತ್ರಿಸುವ ಕುರಿತ ಒಂದು ಅರ್ಜಿ ಸುಪ್ರೀಂಕೋರ್ಟಿನಲ್ಲಿದೆ. ಚೀಫ್ ಜಸ್ಟಿಸ್ ಅಧ್ಯಕ್ಷತೆ ಪೀಠ ವಿಚಾರಣೆ ನಡೆಸಿತ್ತು.

ಅರ್ಜಿಯಲ್ಲಿ ಕೇಂದ್ರ ಸರಕಾರ, ವಾರ್ತಾ ವಿನಿಮಯ ಸಚಿವಾಲಯ ಇಂಟರ್ನೆಟ್ ಆಂಡ್ ಮೊಬೈಲ್ ಅಸೋಸಿಯೇಶನ್‍ಗೆ ಕೋರ್ಟು ನೋಟಿಸು ಜಾರಿ ಮಾಡಿತ್ತು. ಈಗ ಡಿಜಿಟಲ್ ಫ್ಲಾಟ್‍ಪಾರ್ಮ್‌ಗಳನ್ನು ನಿಯಂತ್ರಿಸಲು ಸ್ವತಂತ್ರ ಮಂಡಳಿಯಾಗಲಿ, ಕಾನೂನಾಗಲಿ ಇಲ್ಲ. ಇದನ್ನು ರೂಪಿಸಬೇಕಾಗಿದೆ ಎಂದು ಕೇಂದ್ರ ಸರಕಾರ ನಿಲುವು ವ್ಯಕ್ತಪಡಿಸಿತ್ತು.