ಕಾಶ್ಮೀರದ ವಾಸಿಂ ಅಹಮದ್ ಭಟ್ ಗೆ ದೇಶವೇ ಸೆಲ್ಯೂಟ್: ಅಷ್ಟಕ್ಕೂ ಆತನ ಸಾಧನೆ ಏನು?

0
193

ಸನ್ಮಾರ್ಗ ವಾರ್ತೆ

ಯಾವಾಗಲೂ ದೊಡ್ಡ ಮಟ್ಟದಲ್ಲಿ ಆಲೋಚಿಸಬೇಕು ಎಂದು ದೊಡ್ಡಪ್ಪ ಹೇಳುತ್ತಿದ್ದರು. ನಾನೀಗ ಸಂತೋಷವಾಗಿದ್ದೇನೆ. ಆದರೆ ಎಲ್ಲವೂ ಇಲ್ಲಿಗೆ ಮುಗಿದಿಲ್ಲ. ಸಮಾಜಕ್ಕೆ ಏನಾದರೂ ಸೇವೆ ನಡೆಸಲು ಅವಕಾಶ ಸಿಕ್ಕಾಗ ಮಾತ್ರ ಪೂರ್ಣ ರೀತಿಯ ಸಂತೋಷ ಸಿಗಬಲ್ಲದು ಎಂದು ಈ ಬಾರಿಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 7ನೇ ರ್‍ಯಾಂಕ್ ಪಡೆದಿರುವ ಕಾಶ್ಮೀರದ ವಾಸಿಂ ಅಹಮದ್ ಭಟ್ ಹೇಳಿದ್ದಾರೆ.

ಇದಕ್ಕಾಗಿ ಐದು ವರ್ಷಗಳವರೆಗೆ ಕಠಿಣ ಅಧ್ಯಯನ ನಡೆಸಿರುವೆ ಎಂದು ಕೂಡ ಅವರು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಈ ವಸೀಮ್ ಭಟ್ಟಿಗೆ 225 ರ್‍ಯಾಂಕ್ ಲಭಿಸಿತ್ತು. ಆದರೆ ಅದರಿಂದ ಅವರಿಗೆ ತೃಪ್ತಿಯಾಗಲಿಲ್ಲ. ಮರಳಿ ಪ್ರಯತ್ನಿಸಿದರು ಮತ್ತು ಈ ಬಾರಿ 7ನೇ ರ್‍ಯಾಂಕ್ ನೊಂದಿಗೆ ಇಡೀ ಕಾಶ್ಮೀರವನ್ನೇ ಹೆಮ್ಮೆಯ ಕಡಲಲ್ಲಿ ತೇಲಿಸಿದರು.

ಇವರ ತಂದೆ ಸರಕಾರಿ ಉದ್ಯೋಗಿಯಾಗಿದ್ದಾರೆ. ಇಬ್ಬರು ಅಣ್ಣಂದಿದ್ದಾರೆ. ತನ್ನ ಸಾಧನೆಯ ಕ್ರೆಡಿಟ್ ಅನ್ನು ಅವರು ದೊಡ್ಡಣ್ಣ ಮತ್ತು ತಂದೆ ತಾಯಿಗೆ ಅರ್ಪಿಸಿದ್ದಾರೆ.