ಇಸ್ರೇಲ್ ನಡೆಸಿದ ಆಕ್ರಮಣದಲ್ಲಿ ಗಂಭೀರ ಗಾಯಗೊಂಡಿದ್ದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯ್ಯ ಅವರ ಮೊಮ್ಮಗಳು ಮೃತ

0
247

ಸನ್ಮಾರ್ಗ ವಾರ್ತೆ

ಇಸ್ರೇಲ್ ನಡೆಸಿದ ಆಕ್ರಮಣದಲ್ಲಿ ಗಂಭೀರ ಗಾಯಗೊಂಡಿದ್ದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯ್ಯ ಅವರ ಮೊಮ್ಮಗಳು ಮೃತಪಟ್ಟಿದ್ದಾಳೆ. ಈದ್ ದಿನದಂದು ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಹತ್ಯೆಗೀಡಾಗಿದ್ದ ಇಸ್ಮಾಯಿಲ್ ಹನಿಯ್ಯ ಅವರ ಮಗನ ಮಗಳು ಈ ಮಲಕ್.

ಈದ್ ದಿನದಂದು ನಿರಾಶ್ರಿತ ಕ್ಯಾಂಪ್ ಗೆ ಭೇಟಿ ನೀಡಲು ಬಂದಿದ್ದ ಇಸ್ಮಾಯಿಲ್ ಹನಿಯ್ಯ ಅವರ ಮಕ್ಕಳು ಮತ್ತು ಮೊಮ್ಮಕ್ಕಳಿದ್ದ ವಾಹನದ ಮೇಲೆ ಇಸ್ರೇಲ್ ವಾಯು ದಾಳಿ ನಡೆಸಿದ್ದು ಇದರಲ್ಲಿ ಅವರ ಮೂವರು ಮಕ್ಕಳು ಮತ್ತು ನಾಲ್ವರು ಮೊಮ್ಮಕ್ಕಳು ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಮಗಳು ಮಲಕ್ ಇದೀಗ ಮೃತಪಟ್ಟಿದ್ದಾಳೆ

ನನ್ನ ಮಕ್ಕಳ ರಕ್ತವು ನನ್ನ ಜನರ ರಕ್ತಕ್ಕಿಂತ ಹೆಚ್ಚಿನದಲ್ಲ ಎಂದು ಇಸ್ಮಾಯಿಲ್ ಹನಿಯ್ಯ ತನ್ನ ಮಕ್ಕಳ ಮತ್ತು ಮೊಮ್ಮಕ್ಕಳ ಸಾವಿಗೆ ಪ್ರತಿಕ್ರಿಸಿದ್ದರು ಮತ್ತು ಈ ಪ್ರತಿಕ್ರಿಯೆ ಜಾಗತಿಕವಾಗಿ ವೈರಲಾಗಿತ್ತು

LEAVE A REPLY

Please enter your comment!
Please enter your name here