ಲಕ್ಷದ್ವೀಪದ ಆಡಳಿತ ಜಾರಿಗೊಳಿಸುತ್ತಿರುವ ಸುಧಾರಣೆಯ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಕೇರಳ ಹೈಕೋರ್ಟ್

0
469

ಸನ್ಮಾರ್ಗ ವಾರ್ತೆ

ಕೊಚ್ಚಿ: ಲಕ್ಷದ್ವೀಪದ ಆಡಳಿತ ಜಾರಿಗೊಳಿಸುತ್ತಿರುವ ಸುಧಾರಣೆಯ ವಿರುದ್ಧ ಅರ್ಜಿಯನ್ನು ಹೈಕೋರ್ಟು ತಳ್ಳಿಹಾಕಿದ್ದು ಡೈರಿ ಫಾರಂ ಮುಚ್ಚುವುದು, ಶಾಲೆಯಲ್ಲಿ ಮಧ್ಯಾಹ್ನದ ಮೆನು ಸುಧಾರಣೆ ಸಹಿತ ಅರ್ಜಿಯನ್ನು ಚೀಫ್ ಜಸ್ಟಿಸ್ ಅಧ್ಯಕ್ಷತೆಯ ವಿಭಾಗೀಯ ಪೀಠ ತಳ್ಳಿಹಾಕಿದೆ.

ಸೇವ್ ಲಕ್ಷದ್ವೀಪ ಫಾರಂ ಸಂಘಟನೆ ಸಹಿತ ಹಲವರು ಲಕ್ಷದ್ವೀಪ ಆಡಳಿತದ ವಿರುದ್ಧ ಕೋರ್ಟಿನ ಮೊರೆ ಹೋಗಿದ್ದರು. ಹಲವಾರು ವರ್ಷಗಳಿಂದಿರುವ ಡೈರಿ ಫಾರಂ ಮುಚ್ಚುವುದನ್ನು ತಡೆಯಬೇಕು. ಇದು ಖಾಸಗೀಕರಣದ ಪೂರ್ವಭಾವಿಯಾಗಿ ನಡೆಯುತ್ತಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು. ಶಾಲೆಯ ಮಧ್ಯಾಹ್ನದೂಟದಿಂದ ಬೀಫ್ ಮೆನು ತೆಗೆಯುವುದು ಇತ್ಯಾದಿಯನ್ನು ಪ್ರಶ್ನಿಸಿ ಇನ್ನೊಂದು ಅರ್ಜಿ ಸಲ್ಲಿಸಲಾಗಿತ್ತು.

ನೀತಿ ಪರವಾಗಿ ತೆಗೆದುಕೊಂಡ ತೀರ್ಮಾನ ಇದು ಅದರಲ್ಲಿ ಕೋರ್ಟು ಮಧ್ಯಪ್ರವೇಶಿಸಬಾರದೆಂದು ಲಕ್ಷದ್ವೀಪ ಆಡಳಿತ ವಾದಿಸಿತ್ತು. ದ್ವೀಪದ ಆಡಳಿತ ಸುಧಾರಣೆಗಳು ಕರಡು ಆಗಿದೆ. ಅದು ಕೇಂದ್ರ ಸರಕಾರದ ಪರಿಗಣನೆಯಲ್ಲಿದೆ ಎಂದು ಹೈಕೋರ್ಟಿನಲ್ಲಿ ಅದು ತಿಳಿಸಿತ್ತು.