ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ವತಂತ್ರ ಸ್ಪರ್ಧೆ- ಕಮಲ್ ಹಾಸನ್

0
361

ಸನ್ಮಾರ್ಗ ವಾರ್ತೆ

ಚೆನ್ನೈ: ವಿಧಾನಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಪಾರ್ಟಿ ದಯನೀಯ ಪರಾಭವಗೊಂಡಿದ್ದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಒಂಬತ್ತು ಜಿಲ್ಲೆಗಳಲ್ಲಿ ಅಕ್ಟೋಬರ್ ಆರು ಮತ್ತು ಒಂಬತ್ತಕ್ಕೆ ಚುನಾವಣೆ ನಡೆಯಲಿದೆ. ಪಾರ್ಟಿ ಅಭ್ಯರ್ಥಿಗಳ ಪ್ರಚಾರಕ್ಕೆ ಕಮಲ್ ಹಾಸನ್ ಸ್ವತಃ ಹೋಗಲಿದ್ದಾರೆ. ಪಾರ್ಟಿಯ ಪುನರುಜ್ಜೀಕರಣದ ಮೆಟ್ಟಿಲೆಂದು ಕಮಲ್ ಹಾಸನ್ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ನೋಡುತ್ತಿದ್ದು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಕ್ಕಳ ನೀತಿ ಮಯ್ಯಂ ಸ್ವತಂತ್ರ ಸ್ಪರ್ಧಿಸುತ್ತಿದ್ದು ಏಳು ಜಿಲ್ಲೆಗಳಲ್ಲಿ ತಾನೇ ಪ್ರಚಾರಕ್ಕೆ ಹೋಗುವೆ. ನಾವು ವಿಜಯಗಳಿಸಲಿದ್ದೇವೆ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದರು.

ಈ ವರ್ಷ ಎಪ್ರಿಲ್‍ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಇಂಡಿಯಾ ಜನನಾಯಕ ಕಕ್ಷಿ, ಆಲ್ ಇಂಡಿಯಾ ಸಮತ್ವಮಕ್ಕಳ್ ಕಕ್ಷಿ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೋಗಿದ್ದರು. ಆದರೆ ಅವರ ಪಾರ್ಟಿ ದಯನೀಯ ಸೋಲುಂಡಿತ್ತು. ಪಾರ್ಟಿಯ ಕೆಟ್ಟ ಪ್ರದರ್ಶನ ನೋಡಿ ಪಾರ್ಟಿಯ ಉಪಾಧ್ಯಕ್ಷ ಆರ್.ಮಹೇಂದ್ರನ್ ಮುಂತಾದ ಪ್ರಮುಖರು ಪಕ್ಷ ತೊರೆದಿದ್ದಾರೆ.