ಸನ್ಮಾರ್ಗ ವಾರ್ತೆ
ಕುವೈಟ್ ಸಿಟಿ,ಡಿ.29: ಕುವೈಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜನವರಿ 2ರಿಂದ ತೆರೆಯಲಿದೆ. ಜನವರಿ ಒಂದು ಶುಕ್ರವಾರದವರೆಗೆ ಭೂ, ಜಲ, ವಾಯು ಮಾರ್ಗಗಳನ್ನು ಮುಚ್ಚಲು ತೀರ್ಮಾನಿಸಲಾಗಿತ್ತು. ಇದನ್ನು ಮುಂದುವರಿಸಬೇಕಾಗಿಲ್ಲ ಎಂದು ಸೋಮವಾರ ನಡೆದ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಊರಿನಲ್ಲಿ ಸಿಕ್ಕಿಹಾಕಿಕೊಂಡಿರುವವರು, ಊರಿಗೆ ಹೋಗಲು ಬಯಸುವವರು ಬಹಳ ಮಂದಿಯಿದ್ದು ಇವರಿಗೆ ಈ ನಿರ್ಧಾರ ಸಮಾಧಾನಕರವಾಗಿದೆ.
ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವವರೆಗೆ ವಾಯುಯಾನ, ಜಲ, ಭೂಮಾರ್ಗ ಸಂಚಾರ ನಿಷೇಧಿಸಲಾಗಿತ್ತು. ಆದ್ದರಿಂದ ಪ್ರವಾಸಿಗಳಿಗೆ ಈ ತೀರ್ಮಾನ ಹೆಚ್ಚು ದಿನ ಮುಂದುವರಿಯಬಹುದೇ ಎಂಬ ಆತಂಕವಿತ್ತು.
ಹೊಸ ಕೊರೊನ ಪ್ರಭೇದ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುವೈಟ್ ಹೊಸ ತೀರ್ಮಾನ ತೆಗೆದುಕೊಂಡಿತ್ತು. ಇದರಿಂದ ವಿವಿಧ ಕಾರಣಗಳಿಂದ ಊರಿಗೆ ಹೋಗಲು ಬಯಸಿದ ಅನಿವಾಸಿಗಳಿಗೆ ತೊಂದರೆಯಾಗಿತ್ತು.
ಯುಎಇ, ಟರ್ಕಿ, ಇತಿಯೋಪಿಯ, ಬಹ್ರೈನ್, ಕತಾರ್ ಸಹಿತ ಮಧ್ಯದಾರಿಯಲ್ಲಿ ಕ್ವಾರಂಟೈನ್ನಲ್ಲಿದ್ದವರೂ ಆತಂಕಗೊಂಡಿದ್ದರು. ಕುವೈಟ್ಗೆ ವಿದಾಯ ಹೇಳಿ ಹೊರಟವರೂ ಸರಕಾರದ ನಿರ್ಧಾರದಿಂದ ತೊಂದರೆಗೊಳಗಾಗಿದ್ದರು. ಈಗ ಕುವೈಟ್ ಸಚಿವ ಸಂಪುಟದ ನಿರ್ಧಾರದಿಂದ ಇವರೆಲ್ಲ ನಿರಾಳರಾಗಿದ್ದಾರೆ.












