ಪಾರ್ಟಿ ಘೋಷಣೆಯಿಂದ ಹಿಂದೆ ಸರಿದ ರಜನೀಕಾಂತ್

0
552

ಸನ್ಮಾರ್ಗ ವಾರ್ತೆ

ಚೆನ್ನೈ,ಡಿ.29: ರಾಜಕೀಯ ಪಾರ್ಟಿ ಘೋಷಿಸುವುದಾಗಿ ಹೇಳಿದ್ದ ತಮಿಳು ನಟ ರಜನೀಕಾಂತ್ ಹಿಂದೆ ಸರಿದಿದ್ದಾರೆ. ಚುನಾವಣಾ ರಾಜಕೀಯಕ್ಕಿಲ್ಲ. ಅದಿಲ್ಲದೆಯೂ ಜನಸೇವೆ ಮಾಡಬಹುದು ಎಂದು ತನ್ನ ತೀರ್ಮಾನವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಆರೋಗ್ಯದ ಕಾರಣದಿಂದ ಹಿಂದೆ ಸರಿದಿರುವುದಾಗಿ ಹೇಳಿರುವ ಅವರು ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗದಿರುವುದಕ್ಕೆ ನೋವಿದೆ. ನಿರಾಶೆಯಿಂದ ಈ ವಿಷಯ ತಿಳಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಪೂರ್ವ ನಿರ್ಧರಿತ ಸಮಯದಂತೆ ಅವರು ಡಿಸೆಂಬರ್ 31ಕ್ಕೆ ಪಾರ್ಟಿ ಘೋಷಣೆ ನಡೆಸಬೇಕಾಗಿತ್ತು. ಜನುವರಿಯಲ್ಲಿ ಅವರ ಪಾರ್ಟಿ ಕಾರ್ಯಾಚರಿಸಬೇಕಾಗಿತ್ತು. ಹೀಗೆ ಈ ಹಿಂದೆ ಹೇಳಿದ್ದ ಅವರು ಆರೋಗ್ಯ ಕಾರಣದಿಂದ ಈಗ ಹಿಂದೆ ಸರಿಯುತ್ತಿದ್ದಾರೆ.

ಶುಕ್ರವಾರ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ನಿನ್ನೆ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಒಂದು ವಾರದ ಪೂರ್ಣ ವಿಶ್ರಾಂತಿಗೆ ವೈದ್ಯರು ಸಲಹೆ ಕೊಟ್ಟಿದ್ದಾರೆ. ರಜನೀಕಾಂತ್‍ಗೆ 70 ವರ್ಷ ವಯಸ್ಸು.