ಅಡುಗೆ ಅನಿಲ ದರ ಹೆಚ್ಚಳ

0
403

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.2: ಅಡುಗೆ ಅನಿಲದ ಬೆಲೆ ಹೆಚ್ಚಳವಾಗಿದೆ. ಅಡುಗೆ ಅನಿಲ ಸಿಲಿಂಡರಿಗೆ 50 ರೂಪಾಯಿ ಏರಿಕೆಯಾಗಿದ್ದು 651ರೂಪಾಯಿಗೆ ಏರಿಕೆಯಾಗಿದೆ. ಜೊತೆಗೆ ವಾಣಿಜ್ಯ ಸಿಲಿಂಡರಿನ ಬೆಲೆಯೂ ಹೆಚ್ಚಳವಾಗಿದೆ. ದಿಲ್ಲಿಯ ವಾಣಿಜ್ಯಿಕ ಅಗತ್ಯಗಳಿಗೆ ಬಳಸುವ ಸಿಲಿಂಡರಿನ ಬೆಲೆಯಲ್ಲಿ 54.50 ರೂ. ಹೆಚ್ಚಳವಾಗಿದೆ. ಇದರೊಂದಿಗೆ 19 ಕಿಲೊದ ಅಡಿಗೆ ಅನಿಲ ಸಿಲಿಂಡರಿನ ಬೆಲೆ 1296 ರೂಪಾಯಿಗೆ ಹೆಚ್ಚಳವಾಗಿದೆ. ನವೆಂಬರಿನಲ್ಲಿ ಇದು 1241ಕ್ಕೆ ಲಭ್ಯವಿತ್ತು.

ಐದು ತಿಂಗಳಲ್ಲಿ ಅಡಿಗೆ ಅನಿಲಕ್ಕೆ ಬೆಲೆ ಹೆಚ್ಚಿರಲಿಲ್ಲ. ನಂತರ ಈಗ ಬೆಲೆ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್‍ಗೆ ಕಳೆದ ದಿವಸ ಬೆಲೆ ಏರಿಕೆ ಮಾಡಲಾಗಿದೆ.