ಮಾಸ್ಕ್ ಧರಿಸದವರಿಗೆ ಕೋವಿಡ್-19 ಕೇಂದ್ರಗಳಲ್ಲಿ ಸಮುದಾಯ ಸೇವೆ ಕಡ್ಡಾಯ- ಗುಜರಾತ್ ಹೈಕೋರ್ಟ್ ಆದೇಶ

0
337

ಸನ್ಮಾರ್ಗ ವಾರ್ತೆ

ಗುಜರಾತ್: ಮಾಸ್ಕ್ ಧರಿಸುವ ಮಾನದಂಡಗಳನ್ನು ಉಲ್ಲಂಘಿಸುವವರಿಗೆ ಕೋವಿಡ್-19 ಆರೈಕೆ ಕೇಂದ್ರಗಳಲ್ಲಿ ಸಮುದಾಯ ಸೇವೆಯನ್ನು ಕಡ್ಡಾಯಗೊಳಿಸುವಂತೆ ಗುಜರಾತ್ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸ್ವಚ್ಛತಾ ಕಾರ್ಯಗಳು, ಮನೆಗೆಲಸ ಮತ್ತು ಅಡುಗೆಗೆ ಸಹಾಯ ಮಾಡುವಂತಹ ಚಟುವಟಿಕೆಗಳನ್ನು ಒಳಗೊಂಡಂತೆ ಈ ಸೇವೆಯು ವೈದ್ಯಕೀಯೇತರ ಸ್ವರೂಪದಲ್ಲಿರಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.