ಶಿವಸೇನೆ ಹೋಳಾಗಲು ಕಾರಣ ಬಿಜೆಪಿ

0
3094

ಸನ್ಮಾರ್ಗ ವಾರ್ತೆ

ಮುಂಬಯಿ, ಸೆ. 29: ಶಿವಸೇನೆಯು ವಿಭಜನೆಗೊಳ್ಳಲು ಕಾರಣ ಬಿಜೆಪಿಯಾಗಿದೆ ಎಂದು ಶಿವಸೇನೆ ಉದ್ಧವ್ ಠಾಕರೆ ವಿಭಾಗದ ನಾಯಕ ಸಂಜಯ್ ರಾವುತ್ ಹೇಳಿದರು.

ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕೊಲೆ ನಡೆಯುತ್ತಿದೆ. ಸಂವಿಧಾನ , ಕಾನೂನು ಮತ್ತು ಸುಪ್ರೀಂಕೋರ್ಟಿನ ವಿರುದ್ಧ ಬಿಜೆಪಿ ಸರಕಾರ ಕೆಲಸ ಮಾಡುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿ ಪ್ರಜಾಪ್ರಭುತ್ದ ಅವಸ್ಥೇ ಏನಾಗಿದೆ. ಪ್ರಜಾಪ್ರಭುತ್ವ ಕೊಲೆಯಾಗುತ್ತಿದೆ. ಸಂವಿಧಾನ, ಕಾನೂನು ಸುಪ್ರೀಂಕೋರ್ಟಿನ ವಿರುದ್ಧ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. ಸರಕಾರ ಮತ್ತು ಗೃಹ ಇಲಾಖೆ ಪ್ರಧಾನಿ ವಿಫಲವಾಗಿದ್ದಾರೆ. ಹೊಸ ಪಾರ್ಲಿಮೆಂಟಿಗೆ ಬಂದು ಆದ ಮೇಲೆಯೂ ಮಣಿಪುರದ ಕುರಿತು ಮಾತನಾಡುತ್ತಿಲ್ಲ ಎಂದು ರಾವುತ್ ವಿಷಾದ ಸೂಚಿಸಿದರು.

2024ರ ಚುನಾವಣೆಯ ಮೊದಲು ದೇಶ ಉರಿಸಲು ಏನಾದರೂ ಯೋಜನೆ ಉಂಟಾ ಎಂದು ಅವರು ಕೇಳಿದ ಅವರು ಮುಂಬಯಿಯಲ್ಲಿ ಮರಾಠಿ ಜನರು ಮುಗ್ಗರಿಸಲು ಕಾರಣ ಶಿಂಧೆ ಆಗಿದ್ದಾರೆ. ಅವರಲ್ಲಿ ಪ್ರಾಮಾಣಿಕತೆ ಇರಲಿಲ್ಲ. ಮುಂಬಯಿ, ಮರಾಠಿಗಳನ್ನು ದುರ್ಬಲಗೊಳಿಸಿದ ಹೊಣೆ ಬಿಜೆಪಿಯವರದ್ದಾಗಿದೆ ಎಂದು ರಾವುತ್ ಆರೋಪಿಸಿದರು.

ಮುಂಬಯಿಯನ್ನು ಕೇಂದ್ರ ಆಡಳಿತ ಪ್ರದೇಶ ಮಾಡಲು ಸಂಚು  ನಡೆಯುತ್ತಿದ್ದು ಅದಕ್ಕಾಗಿ ದೊಡ್ಡ ಕಂಪೆನಿಗಳನ್ನು ಮುಂಬಯಿಯಿಂದ ಗುಜರಾತಿಗೆ  ಸ್ಥಳಾಂತರಿಸುವುದು ಎಂದು ಅವರು ಟೀಕಿಸಿದರು. ನಾಗಪುರದಲ್ಲಿ ಪ್ರಳಯ ಬಂತಲ್ಲ. ಆಗ ಯಾಕೆ ಏಕನಾಥ ಶಿಂಧೆ ಸಂದರ್ಶಿಸಿಲ್ಲ ಎಂದು ರಾವುತ್ ಪ್ರಶ್ನಿಸಿದರು.