ವಕ್ಫ್ ಆಸ್ತಿ ದುರುಪಯೋಗವನ್ನು ತಡೆಯುವುದಕ್ಕೆ ಒಂದೇ ಒಂದು ಕಾನೂನು ಹೊಸ ಮಸೂದೆಯಲ್ಲಿಲ್ಲ: ಸಆದತುಲ್ಲ ಹುಸೇನಿ

0
936

ಸನ್ಮಾರ್ಗ ವಾರ್ತೆ

ವಕ್ಫ್ ತಿದ್ದುಪಡಿ ಮಸೂದೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಸಆತುಲ್ಲಾ ಹುಸೇನಿ ತೀವ್ರವಾಗಿ ಆಕ್ಷೇಪಿಸಿದ್ದಾರೆ. ಇದು ಮುಸ್ಲಿಮರ ವಿರುದ್ಧ ಶಾಸನಬದ್ಧ ತಾರತಮ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದವರು ಹೇಳಿದ್ದಾರೆ.

ಈ ದೇಶದ ಬೇರೆ ಬೇರೆ ಸಮುದಾಯಗಳು ತಮ್ಮ ದತ್ತಿ ಕಾನೂನುಗಳಲ್ಲಿ ಈಗಾಗಲೇ ಇರುವ ವಕ್ಫ್ ಕಾನೂನಿನ ನಿಬಂಧನೆಗಳನ್ನು ಹೊಂದಿವೆ. ಬಳಕೆದಾರರಿಂದ ದೇವಾಲಯಗಳು ಎಂದು ಅವುಗಳ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ ಇದು ಬಳಕದಾರರಿಂದವಖ್ಫ್ ಪರಿಕಲ್ಪನೆಯನ್ನೇ ಹೋಲುತ್ತದೆ. ಈ ಕಾರಣದಿಂದ ವಖ್ಫ್ ಮಸೂದೆಯನ್ನು ಮಾತ್ರ ತಿದ್ದುಪಡಿಗೊಳಿಸಿ ಅಂತಹ ರಿಯಾಯಿತಿಗಳನ್ನು ತೆಗೆದುಹಾಕುವುದು ಮುಸ್ಲಿಮರಿಗೆ ಮಾಡುವ ಅನ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತಾವಿತ ತಿದ್ದುಪಡಿಯಲ್ಲಿ ವಖ್ಫ್ ಆಸ್ತಿಯ ಮೇಲೆ ಸರ್ಕಾರದ ನಿಯಂತ್ರಣವನ್ನು ಹೆಚ್ಚಿಸುತ್ತದೆ. ಅದರ ಧಾರ್ಮಿಕ ಸ್ವರೂಪವನ್ನು ಬದಲಾಯಿಸುತ್ತದೆ. ಅಲ್ಲದೆ ಭ್ರಷ್ಟಾಚಾರ ಮತ್ತು ವಕ್ಫ್ ಆಸ್ತಿಗಳ ದುರುಪಯೋಗವನ್ನು ತಡೆಯಲು ಈ ಮಸೂದೆಯಲ್ಲಿ ಏನೇನೂ ಇಲ್ಲ. ಈ ಸಮಸ್ಯೆಗಳನ್ನು ಪರಿಹರಿಸುವ ಒಂದೇ ಒಂದು ನಿಬಂಧನೆಯನ್ನೂ ತಿದ್ದುಪಡಿ ಮಸೂದೆಯಲ್ಲಿ ಸರ್ಕಾರವು ಸೂಚಿಸಿಲ್ಲ ಎಂದು ಹುಸೇನಿ ಹೇಳಿದ್ದಾರೆ. ಒಂದು ವೇಳೆ ಈ ಮಸೂದೆಯನ್ನು ಪಾರ್ಲಿಮೆಂಟ್ ಅಂಗೀಕರಿಸಿದರೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಇತರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದವರು ಎಚ್ಚರಿಸಿದ್ದಾರೆ.